SCROLL NEWS

SCHOOL WIKI >>> ENTER ***INCOME TAX-DOWNLOAD FORM 16 from TRACES SITE >> TUTORIAL in KANNADA****TENTH PAY REVISION/ PENSION REVISION NOTIFICATIONS AND FORMS** GPF CREDIT SLIP- -DOWNLOAD>> LINK>HEALTH AND PHYSICAL EDN- ACTIVITY BOOK- STD V,VI,VII,VIII: LINK

Link Tabs2

SSLC RESULTSSLC 2016-17 iExaMS VIDYA SAMUNNATHI SCHOLARSHIP PF CREDIT SLIPSCHOOL WIKI


6th WORKING DAY RPT-ONLINE TEXTBOOK DATA 2016-17TEXTBOOK INDENTING 2017-18 UPDATE AADHAR DATA


TENTH EQUIVALENCY-2016TEACHER TEXTS-2016SSLC QUESTION POOL

FLASH NEWS

TEACHER TEXTS-2015* TEXTBOOKS-2015*STD VIII - SAMPLE QUESTIONS-ALL SUBJECTS>>>VIEW HERE***NEW DIGITAL COLLABORATIVE TEXTBOOKS 2016-VIEW HERE***WIFS DATA UPLOAD***

INCOME TAX


ಆದಾಯ ತೆರಿಗೆ-
ಉಪಯುಕ್ತ ಮಾಹಿತಿಗಳು

ಈ ಪುಟದಲ್ಲಿ ಒಳಗೊ೦ಡಿರುವ ಮಾಹಿತಿಗಳು

ಆದಾಯ ತೆರಿಗೆ- ತ್ರೈಮಾಸಿಕ ವರದಿ ಸಲ್ಲಿಕೆ
(Quarterly e-TDS Statement Filing)
ವರದಿ ತಯಾರಿ

               ಇತ್ತೀಚಿನ ದಿನಗಳಲ್ಲಿ ಆದಾಯ ತೆರಿಗೆ ಎನ್ನುವ ಪದವು ಎಲ್ಲ ಉದ್ಯೋಗಿಗಳ ದೈನಂದಿನ ಮಾತಿನ ವಿಷಯವೇ ಆಗಿದೆಯೆಂದರೆ ಅತಿಶಯೋಕ್ತಿಯಾಗದು. ಮಾಸಿಕ ವೇತನದಿಂದ ಕಡಿತಗೊಳಿಸಿ (TDS)ಇಲಾಖೆಗೆ ಪಾವತಿಸುವುದು ಖಡ್ಡಾಯವಾಗಿದೆ. ಪ್ರತಿಯೊಬ್ಬ ಉದ್ಯೋಗಿಯ ವಾರ್ಷಿಕ ಆದಾಯವನ್ನು ಮುಂಗಡವಾಗಿ ಅಂದಾಜು ಮಾಡಿ ಆದಾಯ ತೆರಿಗೆಯನ್ನು ಲೆಕ್ಕಹಾಕಿ ಪ್ರತಿ ತಿಂಗಳ ವೇತನದಿಂದ ಕಡಿತಮಾಡಿ ಇಲಾಖೆಗೆ ಪಾವತಿಸುವ ಕರ್ತವ್ಯವನ್ನು ಆಯಾ DDO ಗೆ ವಹಿಸಿಕೊಡಲಾಗಿದೆ. ಇದರಲ್ಲಿ ಲೋಪ
ವಾದರೆ DDO ಗೆ ದಂಡನೆಯ ಭೂತವೂ ಇದೆ.
          ಈ ಪ್ರಕಾರ ಪ್ರತಿ ತಿಂಗಳ ವೇತನದಿಂದ ಕಡಿತಮಾಡಿ ಇಲಾಖೆಗೆ ಪಾವತಿಸಿದ ತೆರಿಗೆಯ(TDS) Statementನ್ನು ತ್ರೈಮಾಸಿಕವಾಗಿ upload ಮಾಡಬೇಕು. ಎಪ್ರಿಲ್, ಮೇ, ಜೂನ್ ತಿಂಗಳ ಪಾವತಿಯ TDS Statementನ್ನು ಜುಲೈ 31ರೊಳಗೆ ಸಲ್ಲಿಸಬೇಕು(ಒಂದನೆಯ ತ್ರೈಮಾಸಿಕ -Q 1). ಜುಲೈ, ಆಗೋಸ್ತು, ಸಪ್ತಂಬರ್ ತಿಂಗಳ ಪಾವತಿಯ TDS Statementನ್ನು ಅಕ್ಟೋಬರ್ 31 (ಎರಡನೆಯ ತ್ರೈಮಾಸಿಕ -Q 2) , ಅಕ್ಟೋಬರ್, ನವೆಂಬರ್, ಡಿಸೆಂಬರ್ ತಿಂಗಳ ಪಾವತಿಯ TDS Statementನ್ನು ಜನವರಿ 31(ಮೂರನೆಯ ತ್ರೈಮಾಸಿಕ -Q 3), ಹಾಗೂ ಜನವರಿ, ಫೆಬ್ರವರಿ, ಮಾರ್ಚ್ ತಿಂಗಳ ಪಾವತಿಯ TDS Statementನ್ನು ಮೇ 15ರೊಳಗೆ(ನಾಲ್ಕನೆಯ ತ್ರೈಮಾಸಿಕ- Q4) ಸಲ್ಲಿಸಬೇಕು.
.TDS Statementಗಳನ್ನು ವಿವಿಧ TIN Felicitation Centreಗಳ ಮೂಲಕ (ಉದಾ:Karvy-Kasaragod) ಸಲ್ಲಿಸಬಹುದು.
ಆದಾಯ ತೆರಿಗೆ ಇಲಾಖೆಯ ತಂತ್ರಾಂಶವಾದ RPUವಿನ ಸಹಾಯದಿಂದ Quarterly TDS Statement ತಯಾರಿಸಿ TIN Facilitation Centre (ಉದಾ:KARVY-Kasaragod)ನಿಂದUpload ಮಾಡಬಹುದು. ನಮ್ಮ ಎಲ್ಲ ದಾಖಲೆಗಳೊಂದಿಗೆ KARVYಯಲ್ಲಿ ಸರದಿ ಕಾದು ಕೂರುವ ಬದಲು ನಾವೇ ಸ್ವತಃ ತಯಾರಿಸಿದ Quarterly TDS Statement ಫೈಲನ್ನು ಸಿ.ಡಿ.ಯಲ್ಲಿ ಮುದ್ರಿಸಿ ಒಯ್ದರೆ ಕೇವಲ 10ನಿಮಿಷದಲ್ಲಿ ಮರಳಿ ಬರಬಹುದು.
        ತ್ರೈಮಾಸಿಕ TDS ಪಾವತಿಯ ಮಾಹಿತಿಯನ್ನೊಳಗೊಂಡ E TDS Return ತಯಾರಿಸಲು Income Tax Department ಉಚಿತವಾಗಿ ಒದಗಿಸುವ ತಂತ್ರಾಂಶವಾದ RPUವನ್ನು ಉಪಯೋಗಿಸಬಹುದು. ನೂತನ version ಆದ RPU 1.9 ನ್ನು ಇಲ್ಲಿ CLICK ಮಾಡಿ Download (Windows OS ಗೆ ಮಾತ್ರ) ಮಾಡಬಹುದು.
(ಸೂಚನೆ - ಪ್ರತಿಯೊ೦ದು ತ್ರೈಮಾಸಿಕ ಅಥವಾ ಅದರ ಆಸುಪಾಸಿನಲ್ಲಿ RPUನ ಹೊಸ ಆವತ್ತಿಯು ಬಿಡುಗಡೆಯಾಗುತ್ತಿರುತ್ತದೆ. ಅದರ ಲಭ್ಯತೆಯನ್ನು ಲಿ೦ಕಿಲ್ಲಿ ಪರಿಶೀಲಿಸಿ ಮಾಡಿ ಬಳಸುವುದು ಉತ್ತಮ. ಆ ಪುಟದಲ್ಲಿNSDL Return Preparation Utility ಎ೦ಬ ಶೀರ್ಷಿಕೆಯಲ್ಲಿ ಕಾಣಬಹುದು)
     ಯಾವುದಾದರೂ ಕಾರಣದಿಂದ TDS ಕಡಿತ ಮಾಡದ ತ್ರೈಮಾಸಿಕವಿದ್ದರೆ Nil Statement ನ್ನು ಸಲ್ಲಿಸಬೇಕು. Nil Statement ನ್ನು ಸಲ್ಲಿಸಲು ಈ ತಂತ್ರಾಂಶದಲ್ಲಿ ಸಾಧ್ಯವಿಲ್ಲ. Nil Statement ನ್ನು ಸಲ್ಲಿಸುವ ರೀತಿಗಾಗಿ ಇಲ್ಲಿ ಮು೦ದಿನ  Post ನೋಡಿರಿ.
Download ಮಾಡಿದ RPU 1.9 ನ್ನು ಕಂಪ್ಯೂಟರಿನ Drive C ಯಲ್ಲಿ Paste ಮಾಡಿರಿ. ಬೇರೆ ಯಾವುದೇ Driveನ ಯಾವುದೇ Folder ಆದರೂ ಸಮಸ್ಯೆಯಿಲ್ಲ.  RPU 1.9 ಸರಿಯಾಗಿ ಕಾರ್ಯವೆಸಗಲು JAVA ತಂತ್ರಾಂಶವೂ ಬೇಕಾಗುತ್ತದೆ. ಅದನ್ನು ಇಲ್ಲಿಂದ Download ಮಾಡಿ ನಿಮ್ಮ ಕಂಪ್ಯೂಟರಿನ Desktopನಲ್ಲಿರಿಸಿ Double click ಮಾಡಿ install ಮಾಡಬಹುದು.


RPU ಉಪಯೋಗಿಸಿ TDS Statement ತಯಾರಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಬೇಕು.
RPU ನ್ನು ತೆರೆಯುವುದು.
• Form ನ್ನು ಭರ್ತಿ ಮಾಡುವುದು.
• Challan Sheet ನ್ನು ಭರ್ತಿ ಮಾಡುವುದು.
• Annexure Iನ್ನು ಭರ್ತಿ ಮಾಡುವುದು.
ನಾಲ್ಕನೆಯ ತ್ರೈಮಾಸಿಕದಲ್ಲಿ ಮಾತ್ರ Annexure II ನ್ನು ಭರ್ತಿ ಮಾಡುವುದು.
• Save ಮಾಡುವುದು.
• Validate ಮಾಡುವುದು.
ಫೈಲುಗಳನ್ನು Pen drive ಅಥವಾ CDಯಲ್ಲಿ ಮುದ್ರಿಸಿ TIN Facilitation Centre (KARVY)ಗೆ ಒಯ್ಯುವುದು.

ಹಂತ 1: RPU ನ್ನು ತೆರೆಯುವುದು.

1. Local Disk C (ಅಥವಾ RPU ಇರುವ ಫೋಲ್ಡರ್
) ಯನ್ನು ತೆರೆದು RPU 1.9 ಫೋಲ್ಡರನ್ನು Double click ಮಾಡಿ ತೆರೆಯಿರಿ.
2. ಅದರೊಳಗಿರುವ ' TDS_RPU.jar ' ಫೈಲನ್ನು Double click ಮಾಡಿ ತೆರೆಯಿರಿ.

3. ಈಗ ಪರದೆಯಲ್ಲಿ ಕಾಣಿಸುವ ಡಯಲೋಗ್ ಬಾಕ್ಸಿನ 'OK ' ಯಲ್ಲಿ ಕ್ಲಿಕ್ಕಿಸಿರಿ. ಆ ಬಳಿಕ ಒಂದೊಂದಾಗಿ ಕಾಣಿಸುವ ಮೂರು ಡಯಲೋಗ್ ಬಾಕ್ಸುಗಳಲ್ಲೂ 'OK ' ಯಲ್ಲಿ ಕ್ಲಿಕ್ಕಿಸಿರಿ. ಈಗ RPU1.9 ನಿಮ್ಮ ಸಿಸ್ಟಮಿನಲ್ಲಿ install ಆಯಿತು.
    1. RPU 1.9ನ್ನು ತೆರೆಯಲು : ಅದೇ ಫೋಲ್ಡರಿನಲ್ಲಿರುವ RPU1.9 ಐಕನಿನಲ್ಲಿ ಡಬಲ್ ಕ್ಲಿಕ್ ಮಾಡಿ ತಂತ್ರಾಂಶವನ್ನು ಬಳಕೆಗಾಗಿ ತೆರೆಯಬಹುದು.(ಈ ಐಕನಿನಲ್ಲಿ ರೈಟ್ ಕ್ಲಿಕ್ ಮಾಡಿ Send to----Desktop(create shortcut) ಕ್ಲಿಕ್ ಮಾಡಿದರೆ ಈ ತಂತ್ರಾಂಶಕ್ಕಿರುವ shortcut ಡೆಸ್ ಟಾಪಿನಲ್ಲಿ ಉಂಟಾಗುವುದು. ಮುಂದಿನ ಬಳಕೆಯ ಸಂದರ್ಭಗಳಲ್ಲಿ ಇದನ್ನು ಡಬಲ್ ಕ್ಲಿಕ್ ಮಾಡಿ ತೆರೆಯಬಹುದು.)



    1. ಈಗ RPU1.9ರ ಮೊದಲ ಪುಟವು ಕಾಣುವುದು. ಒಂದು ವೇಳೆ ಏನಾದರೂ ತೊಂದರೆ ಕಂಡುಬಂದರೆ ಐಕನಿನಲ್ಲಿ ರೈಟ್ ಕ್ಲಿಕ್ ಮಾಡಿ run as administratorಕ್ಲಿಕ್ ಮಾಡಿದರೆ ಸಾಕು.


ಅಲ್ಲಿ 'Form No' ಪಕ್ಕದ drop down menu ವಿನಿಂದ 24Qನ್ನು ಆಯ್ಕೆಮಾಡಿ ಕೆಳಗಿರುವ 'Click to Continue'
ಕ್ಲಿಕ್ಕಿಸಿರಿ. ಈಗ 24Q Form ತೆರೆಯಲ್ಪಡುವುದು.

(ಸೂಚನೆ:ಹೊಸ ಆವೃತ್ತಿಗಳಿಗನುಸಾರವಾಗಿ ಈ ಪುಟದ ವಿನ್ಯಾಸ,ವಿಧಾನಗಳಲ್ಲಿ ಚಿಕ್ಕ ಪುಟ್ಟ ವ್ಯತ್ಯಾಸಗಳಿರಬಹುದು)

ಅಲ್ಲಿ Form, Challan, Annexure I ಎನ್ನುವ3 ಪುಟಗಳಿವೆ.

ಹಂತ 2: Form ನ್ನು ಭರ್ತಿ ಮಾಡುವುದು.

Form ನಲ್ಲಿ ಸಂಸ್ಥೆ ಮತ್ತು ಉದ್ಯೋಗಿಗಳ ವೇತನದಿಂದ TDS ಕಡಿತಮಾಡಿ ಇಲಾಖೆಗೆ ಪಾವತಿಸಬೇಕಾದ ವ್ಯಕ್ತಿಯ(DDO- Headmaster/Headmistress)ಕುರಿತಾದ ಮಾಹಿತಿಯನ್ನು ನೀಡಬೇಕು. ಇಲ್ಲಿರುವ ' * ' ಚಿಹ್ನೆಯ Fieldಗಳನ್ನು ಖಾಲಿಯಾಗಿ ಬಿಡಬಾರದು.
Fieldಗಳನ್ನು ಈ ರೀತಿಯಾಗಿ ಭರ್ತಿಮಾಡಬೇಕು.

1. Quarterly Statement for quarter ended *: Q1, Q2, Q3, Q4ಇವುಗಳಲ್ಲಿ ಸೂಕ್ತವಾದುದನ್ನು
drop down menu ವಿನಿಂದ ಆಯ್ಕೆಮಾಡಬೇಕು.(ಇದು select ಆಗದಿದ್ದರೆ Financial Year ನ್ನು drop down menu ವಿನಿಂದ ಭರ್ತಿಗೊಳಿಸಬೇಕು. ತದನಂತರ quarter ಆಯ್ಕೆಮಾಡಬಹುದು.)
(ನೀವು Q4 ನ್ನು ಆಯ್ಕೆಮಾಡಿದರೆ Annexure 1 ನ ಜತೆಗೆ Annexure II ಎನ್ನುವ ಪುಟವೂ ಪ್ರತ್ಯಕ್ಷವಾಗುವುದನ್ನು ಕಾಣಬಹುದು. Q4ರಲ್ಲಿ Annexure 1 ನ ಜತೆಗೆ Annexure II ನ್ನೂ ಭರ್ತಿಮಾಡಬೇಕೆಂದು ಅರ್ಥ)
2. Financial Year* - :ಪ್ರಸ್ತುತ Statement ಯಾವ ವರ್ಷದ ತ್ರೈಮಾಸಿಕಕ್ಕೆ ಸಂಬಂಧಪಟ್ಟಿದೆಯೋ ಆ ವರ್ಷ. 2016 ಅಕ್ಟೋಬರ್, ನವೆಂಬರ್, ಡಿಸೆಂಬರ್ ತಿಂಗಳ ತ್ರೈಮಾಸಿಕವಾಗಿದ್ದರೆ 2016 ತುಂಬಿಸಬೇಕು.
Particulars of salary drawn
1. Tax Deduction and Collection Account No *–: ಇಲ್ಲಿ ಸಂಸ್ತೆಯTAN ಸಂಖ್ಯೆಯನ್ನು ಕೊಡಬೇಕು.ನಾಲ್ಕು ಇಂಗ್ಲಿಷ್ ಅಕ್ಷರಗಳಿಂದ ಆರಂಭವಾಗುವ TAN ನಾಲ್ಕನೆಯ ಅಕ್ಷರವು ಸಂಸ್ಥೆಯ ಹೆಸರಿನ ಮೊದಲ ಅಕ್ಷರವಾಗಿದೆ.

2. Permanent Account Number *-: ಸರಕಾರೀ ಸಂಸ್ಥೆಗಳಿಗೆ (Aided School ಸಹಿತ) PAN ಅಗತ್ಯವಿಲ್ಲ.ಹಾಗಾಗಿ ಹೀಗೆ ತುಂಬಿಸಿ: PANNOTREQD ( ಸರಿಯಾಗಿ 10 ಅಕ್ಷರಗಳು)
3. Financial Year – :ಹಣಕಾಸು ವರ್ಷdrop down list ನಿಂದ.
4. Type of deductor - : 'State Government' – drop down list ನಿಂದ.
Particulars of Deductor (Employer)
1. Name *- : ಸಂಸ್ಥೆಯ ಹೆಸರು. ಇದು TAN ನ ನಾಲ್ಕನೆಯ ಅಕ್ಷರದಿಂದ ಆರಂಭವಾಗುವುದು.
2. Branch/Division if any –: ಶಾಲೆಗಳಿಗೆ ಬೇಡ.
3. Statename -: Dropdownlist ನಿಂದ.
4. Flat No *–: Building number.
5. Area /Location – :ಸ್ಥಳ.
6. Road /Street /Lane –: ರಸ್ತೆ ಯಾ ಬೀದಿ.
  1. Pin code* - ಭರ್ತಿಗೊಳಿಸಲೇ ಬೇಕು.
Account Office Identification Number(AIN)...: : 1046054 ಇದು ಕಾಸರಗೋಡು ಜಿಲ್ಲಾ ಖಜಾನೆಯ AIN. ಈಗ ನಿರ್ಬಂಧ.
9. DDO Code -: ನಿರ್ಬಂಧವಲ್ಲ.
10. Name of Premises /building -: ಸಂಸ್ಥೆಯ ಹೆಸರನ್ನು ತುಂಬಿಸಬಹುದು.
11. Town /City /District -: ಜಿಲ್ಲೆ.
12. State - : Dropdownlist ನಿಂದ.
13. E Mail – : ಸಂಸ್ಥೆ ಯಾ ಮುಖ್ಯೋಪಾಧ್ಯಾಯರ E Mailವಿಳಾಸ.
14. Has address changed since last return -: ಸಂಸ್ಥೆಯ ವಿಳಾಸ ಬದಲಾಗಿದ್ದರೆ 'Yes' ಇಲ್ಲದಿದ್ದರೆ 'No' .
Particulars of Person Responsible for Deduction of Tax

ಇಲ್ಲಿ ಮುಖ್ಯೋಪಾಧ್ಯಾಯರಿಗೆ (DDO )ಸಂಬಂಧಪಟ್ಟ ಮಾಹಿತಿಗಳನ್ನು ನೀಡಬೇಕು.
1. Name - : DDO ಹೆಸರು.
2. Designation –: Headmaster/Headmistress.ಮುಂದಕ್ಕೆ Flat No ನಿಂದ Pincodeತನಕ ಸಂಸ್ಥೆಗೆ ಸಂಬಂಧಪಟ್ಟ ಮಾಹಿತಿಗಳನ್ನೇ ನೀಡಬೇಕು. DDO ಖಾಸಗಿ ಮಾಹಿತಿಯನ್ನಲ್ಲ. ಇಲ್ಲಿ ಕಾಣುವ "Same as above" ಪಕ್ಕದ ಬಾಕ್ಸಿಗೆ ಟಿಕ್ ಮಾಡಿದರೆ ಹಿ೦ದೆ ಕೊಟ್ಟ ಮಾಹಿತಿಗಳು ಸ್ವಯ೦ ಭರ್ತಿಯಾಗುತ್ತವೆ.
E Mail - :ಸಂಸ್ಥೆ ಯಾ ಮುಖ್ಯೋಪಾಧ್ಯಾಯರ E Mailವಿಳಾಸ.
Has address changed since last return - : DDO ರ ವಿಳಾಸ ಬದಲಾಗಿದ್ದರೆ (ವರ್ಗಾವಣೆ, ಸುದೀರ್ಘ ರಜೆ ಯಾ ನಿವೃತ್ತಿಯಿಂದಾಗಿ ಹೊಸಬರು ಬಂದಿದ್ದರೆ) 'Yes' ಇಲ್ಲದಿದ್ದರೆ 'No' .
Has regular statement for Form 24Q filed for earlier period –: ಹಿಂದಿನ ತ್ರೈಮಾಸಿಕದ TDS Statementನ್ನು ಫೈಲ್ ಮಾಡಿದ್ದರೆ 'Yes', ಇಲ್ಲದಿದ್ದರೆ 'No' .

Receipt No. of earlier statement filed for Form 24Q – :ಇಲ್ಲಿ ಹಿಂದಿನ ತ್ರೈಮಾಸಿಕದ TDS
Statement ಫೈಲಿಂಗಿಗೆ ಸಂಬಂಧಿಸಿದ 15 ಅಂಕೆಗಳ Provisional Receipt Number (Token number) ನೀಡಬೇಕು.

ಹಂತ : 3 Challan sheet ಭರ್ತಿ ಮಾಡುವುದು.

'Challan' ಟ್ಯಾಬ್ ಕ್ಲಿಕ್ಕಿಸಿ Challan sheet ಪುಟವನ್ನು ತೆರೆಯಿರಿ.

Challan sheet ನಲ್ಲಿ ಒಂದು ತ್ರೈಮಾಸಿಕದಲ್ಲಿ ಎಷ್ಟು ಸಲ TDS ಪಾವತಿಸಲಾಗಿದೆಯೋ ಅಷ್ಟು ಸಾಲುಗಳನ್ನು (Rows) ಸೇರಿಸಬೇಕು. 'Insert Row'ನಲ್ಲಿ ಕ್ಲಿಕ್ಕಿಸಿ ಸಾಲುಗಳ ಸಂಖ್ಯೆಯನ್ನು ಕೊಡಬೇಕು. [No of Rows=No of bills with TDS on salary payments made in the quarter ] ಸಂಬಳ ಬಿಲ್ಲಿನ ಹೊರತಾಗಿ ಬ್ಯಾಂಕಿನಲ್ಲಿ ಪಾವತಿಸಿದ್ದರೆ ಒಂದೊಂದು ಚಲನಿಗೂ ಒಂದೊಂದು Row ಸೇರಿಸಬೇಕು.













ಪ್ರತಿಯೊಂದು ಕಾಲಂನ್ನು ಹೀಗೆ ತುಂಬಿಸಿರಿ.
1. Sl No -:ತಾನಾಗಿ ಬರುವುದು.

2. Update mode for challan :- ಅ೦ತೆಯೇ ಬಿಡಿ.
4. TDS -: ಒಂದೊಂದು ಚಲನಿನ ಮೂಲಕ ಪಾವತಿಸಿದ ಮೊತ್ತ.
5. Surcharge -: '0'
6. Education Cess -: '0'
7. Interest -: '0'
8. Fee -: '0'
9. Others-: '0'

14. BSR Code /24G Receipt No - BSR Code ಅಥವಾ 24G Receipt No. (7ಅಂಕೆಗಳು)ಇದು
BINನ ಮೊದಲ 7 ಅಂಕೆಗಳು. BIN(Book Identification Number) ತಿಳಿಯಲು ಇಲ್ಲಿ click ಮಾಡಿರಿ.
BIN ತಿಳಿಯುವಲ್ಲಿ ಸಂಶಯಗಳುಂಟಾದರೆ ಮಾಹಿತಿಯು ಮು೦ದಿನ Postನಲ್ಲಿದೆ.
16. Date on which Tax deposited – : BINನಲ್ಲಿದೆ. ಸಾಮಾನ್ಯವಾಗಿ ಸಂಬಳ ಬಿಲ್ ನಗದೀಕರಿಸಿದ ತಿಂಗಳ ಕೊನೆಯ ದಿನ. 3-10-2016 ರಂದು ನಗದೀಕರಿಸಿದರೆ 31-10-2016 ಆಗಿರುವುದು. (RPUನಲ್ಲಿ ದಿನಾಂಕಗಳನ್ನು ಸೇರಿಸಲು ಪ್ರಸ್ತುತ cellನಲ್ಲಿ double click ಮಾಡಿದರೆ ತೆರೆಯುವ ಕೆಲೆಂಡರ್ ಬಳಸುವುದು ಉತ್ತಮ. ಇಲ್ಲದಿದ್ದರೆ 31/10/2016 ಎ೦ದು ಕೊಡಬೇಕು.)
18. DDO/Transfer voucher/ Challan Serial No. -: BINನಿಂದ DDO Serial Number.
19. Whether TDS deposited by Book Entry -: Select 'YES' from the dropdown list.
20. Interest - : '0'
21. Others - :'0' .
22. Minor Head of Challan –: ಖಾಲಿ ಬಿಡಿ.
ಚಲನಿನ ಎಲ್ಲ ಸಾಲುಗಳನ್ನೂ ಹೀಗೆ ತುಂಬಿಸಿದ ಬಳಿಕ ಮೇಲ್ಗಡೆ ಕಾಣುವAnnexure 1 ಟ್ಯಾಬ್ ಒತ್ತಿ ಮುಂದಿನ ಪುಟಕ್ಕೆ ಸಾಗಬಹುದು.

ಹಂತ : 4 Annexure 1 ಭರ್ತಿ ಮಾಡುವುದು.

ಚಲನಿನಂತೆ Annexure 1ರಲ್ಲಿಯೂ ಅಗತ್ಯವಿರುವಷ್ಟು ಸಾಲುಗಳನ್ನು insert ಮಾಡಬೇಕು.
(No of rows to be inserted = Total number of employees from whose salary tax was deducted during the quarter. Even if employee name repeats in different bills it should be counted separately for each bill as per BIN)
ಉದಾ: ಎರಡನೆಯ ತ್ರೈಮಾಸಿಕದ ಮೂರು ತಿಂಗಳುಗಳಲ್ಲಿ ತಲಾ 5ಮಂದಿಯ ಪಾವತಿಯಿದ್ದರೆ ಒಟ್ಟು 15 ಸಾಲುಗಳು ಬೇಕು. ಮೂರು ತಿಂಗಳುಗಳಲ್ಲಿಯೂ ಒಂದೇ ಹೆಸರುಗಳು ಆವರ್ತಿಸುವುದಿದ್ದರೂ ಒಟ್ಟು 15 ಸಾಲುಗಳು.  ಅೋಸ್ತು ಯಾ ಸೆಪ್ಟಂಬರ್ ತಿ೦ಗಳುಗಳಲ್ಲಿ(ಓಣಂ ಪ್ರಯುಕ್ತ) 2 ಸ೦ಬಳಗಳು ಬರುವುದರಿ೦ದ ಎರಡಕ್ಕೂ ಒ೦ದೇ BIN ಬ೦ದಿರುತ್ತದೆ- ಎ೦ದರೆ ತಿ೦ಗಳಿಗೆ ಒ೦ದೇ ಪಾವತಿ, ಮೊತ್ತ ಮಾತ್ರ ಇಮ್ಮಡಿ. ಆಗ 10 ಸಾಲುಗಳು ಸಾಕು.
---> Insert Row ---->ಒ೦ದೊ೦ದು ಚಲನಿನ ಎದುರು(No. of deductee records to be added) ಅದರ ಮೂಲಕ ಪಾವತಿಸಿದವರ ಸ೦ಖ್ಯೆ----->OK


ಪ್ರತಿಯೊಂದು ಕಾಲಂನ್ನು ಹೀಗೆ ತುಂಬಿಸಿರಿ.
1. Challan Serial No –: Dropdown list ನಿಂದ ಆಯ್ಕೆಮಾಡಬೇಕು. ಮೊದಲ ತಿಂಗಳಿನ ಬಿಲ್ಲಿನಲ್ಲಿ 5 ಮಂದಿಯ ಪಾವತಿಯಿರುವುದರಿಂದ ಐದೂ ಸಾಲುಗಳಲ್ಲಿ ಕ್ರಮ ನಂಬ್ರ 1 ಆಗಿರಬೇಕು. ಎರಡನೆಯ ತಿಂಗಳಿನಲ್ಲೂ 5 ಮಂದಿಯಾದುದರಿಂದ ಮುಂದಿನ ಐದೂ ಸಾಲುಗಳಲ್ಲಿ ಕ್ರಮ ನಂಬ್ರ 2---ಹೀಗೆ. (ಈಗ 7 ನೆಯ ಕಾಲಂನಲ್ಲಿ ಮಾಹಿತಿಗಳು ಸ್ವತಃ ಭರ್ತಿಯಾಗಿರುವುದನ್ನು ಕಾಣಬಹುದು.)
6. Section under which payment made - : 92A ಯನ್ನು ಆಯ್ಕೆಮಾಡಿ.

11. Sr No – ಗಮನಿಸಿ : ಇಲ್ಲಿ ಮೊದಲನೆಯ ಬಿಲ್ಲಿನ ಮೊದಲನೆಯ ವ್ಯಕ್ತಿಗೆ '1', ಎರಡನೆಯವರಿಗೆ '2' -- ಎರಡನೆಯ ಬಿಲ್ಲಿನ ಮೊದಲನೆಯ ವ್ಯಕ್ತಿಗೆ '1', ಎರಡನೆಯವರಿಗೆ '2'-----ಹೀಗೆ ಕ್ರಮ ನಂಬ್ರ ಕೊಡಬೇಕು.

12. Employee Reference No. provided by Employer – :ಇಲ್ಲಿ ಪ್ರತಿಯೊಬ್ಬರ PEN ಕೊಡಬಹುದು.
14. PAN of the Employee - :PAN (ತಪ್ಪಿಲ್ಲದೆ ಇರಬೇಕು--ತಪ್ಪಾದರೆ ಮುಂದೆ Correction Statement ಕೊಡಬೇಕಾಗಿ ಬರುತ್ತದೆ)
15. Name of the Employee – :PAN ಕಾರ್ಡಿನಲ್ಲಿರುವಂತೆ ತೆರಿಗೆದಾರನ ಹೆಸರನ್ನು ತುಂಬಿಸಿದರೆ ಒಳ್ಳೆಯದು.
16. Date of Payment/Credit – :ಬಿಲ್ ನಗದೀಕರಿಸಿದ ತಿಂಗಳಿನ ಕೊನೆಯ ದಿನ. (ಟ್ರೆಶರಿಯಿಂದ ಪ್ರತಿ ತಿಂಗಳ ಕೊನೆಯ ದಿನದಂದು ಆ ತಿಂಗಳ ಎಲ್ಲ ಪಾವತಿಗಳನ್ನೂ upload ಮಾಡಲಾಗುವುದು.)
17. Amount paid/collected – :ಇಲ್ಲಿ ಪ್ರತಿಯೊಬ್ಬರ Gross salary ಯನ್ನು ತುಂಬಿಸಬೇಕು.

18. TDS –: ಪ್ರಸ್ತುತ ತಿಂಗಳಲ್ಲಿ ಕಡಿತ ಮಾಡಿ ಪಾವತಿಸಿದ ತೆರಿಗೆ.
19. Surcharge - :'0'
20. Education Cess -: '0'
23. Total Tax deposited - :TDS (ಕಾಲಂ 18)
25. Date of deduction – :ಆ ತಿಂಗಳಿನ ಕೊನೆಯ ದಿನ.
26. Remarks – :ಖಾಲಿ ಬಿಡಿ.
27. Certificate number -:ಖಾಲಿ ಬಿಡಿ.
Annexure 1 ಪೂರ್ತಿಯಾಗುವುದರೊಂದಿಗೆ ಈ ತ್ರೈಮಾಸಿಕದ(Q1ಯಾ Q2ಯಾ Q3) ಮಾಹಿತಿ ತುಂಬುವಿಕೆ ಮುಗಿಯಿತು.
ಇನ್ನು Saving, Validation ಎನ್ನುವ ಮುಂದಿನ ಹಂತಗಳಿಗೆ ಹೋಗಬಹುದು.
ಒಂದು ತೈಮಾಸಿಕದ ಒಂದೊಂದು ತಿಂಗಳಿನ ವಿವರಗಳನ್ನು ಆಗಿಂದಾಗ ಫೀಡ್ ಮಾಡಿಡುವುದಿದ್ದರೆ ಒಂದನೆಯ ತಿಂಗಳ ಮಾಹಿತಿಯನ್ನು ತುಂಬಿಸಿ Saveಮಾಡಿದರೆ ಮಾತ್ರ ಸಾಕು. Validation ಪ್ರಕ್ರಿಯೆಯನ್ನು ಮೂರನೆಯ ತಿಂಗಳಿನ ಬಳಿಕ ಮಾಡಬೇಕು. ಏಕೆಂದರೆ Validation ಎನ್ನುವುದು TDS statementತಯಾರಿಸುವುದರ ಕೊನೆಯ ಹಂತವಾಗಿದೆ.
ಇಂತಹ ಸಂದರ್ಭದಲ್ಲಿ 2 ಮತ್ತು 3ನೆಯ ತಿಂಗಳುಗಳ ವಿವರಗಳನ್ನು ತುಂಬಿಸುವಾಗ PAN of the Employee, Name of the Employee, Amount paid/collected ಮುಂತಾದ ಹಿಂದಿನ ತಿಂಗಳಿನ ಮಾಹಿತಿಗಳ ಆವರ್ತನೆಯ ಕಾಲಂಗಳನ್ನು Copy, Pasteಮುಖಾಂತರ ಭರ್ತಿ ಮಾಡುವುದು ಒಳಿತು. ಆಗ ಎಲ್ಲ ವಿವರಗಳೂ ತಪ್ಪಿಲ್ಲದೆ Paste ಆಗಿರುತ್ತವೆ.

ನಾಲ್ಕನೆಯ ತ್ರೈಮಾಸಿಕದಲ್ಲಿ ಮಾತ್ರ Annexure II ಎನ್ನುವ ಇನ್ನೊಂದು ಪುಟವೂ ಇದೆ.

ಹಂತ : 5 Annexure II ಭರ್ತಿ ಮಾಡುವುದು---ನಾಲ್ಕನೆಯ ತ್ರೈಮಾಸಿಕದಲ್ಲಿ ಮಾತ್ರ.

Annexure II ತೆರೆಯಿರಿ.
ಇಲ್ಲಿ ಕೂಡ ಅಗತ್ಯವಿರುವಷ್ಟು ಸಾಲುಗಳನ್ನು insert ಮಾಡಬೇಕು. ಒಬ್ಬರಿಗೆ ಒ೦ದು ಸಾಲು ಸಾಕು.
Number of Rows to be inserted = Number unique employees from whose salary tax was deducted at source at least once during the Financial Year in any quarter. (Only one row for one employee)
---> Insert Row ---->ಸಾಲುಗಳ ಸಂಖ್ಯೆ----->OK
(ಈ ಪುಟದಲ್ಲಿ ಪ್ರತಿಯೊಬ್ಬ ಉದ್ಯೋಗಿಯ ವಾರ್ಷಿಕ ವೇತನ ಪಾವತಿಯ ಮಾಹಿತಿಗಳು ಬೇಕಾಗಿರುವುದರಿಂದ
Form 16 ಅಥವಾ Annual Income statement ಇದ್ದರೆ ಅನುಕೂಲ.)

3. PAN of the employee -: PAN
4. Name of the employee - :ಉದ್ಯೋಗಿಯ ಹೆಸರು.
5. Deductee Type –: Drop down List ನಿಂದ Women, Senior Citizen, others ಆಯ್ಕೆ ಮಾಡಿ. ಪುರುಷರಿಗೆ -Others.
6. Date on which employed with current Employer – :ಹಣಕಾಸು ವರ್ಷದ ಮೊದಲ ದಿನ. ಉದಾ- 01-04-2016. ತದನಂತರ ನೇಮಕವಾದವರಿಗೂ ವರ್ಗಾವಣೆಯಾಗಿ ಬಂದವರಿಗೂ ಆಯಾ ದಿನಾಂಕಗಳನ್ನು ಕೊಡಬಹುದು.
7. Date to which employed with current employer -: ಹಣಕಾಸು ವರ್ಷದ ಕೊನೆಯ ದಿನ. ಉದಾ- 31-03-2017.
10. Total Amount of salary - : Form 16 ರ ಪ್ರಕಾರ ಉದ್ಯೋಗಿಯ ವಾರ್ಷಿಕ ವೇತನ.
11. Deduction under section 16(II) - :(ಇದು Entertainment Allowance )--'0'
12. Deduction under section 16(III) - : ಇಲ್ಲಿ ಪ್ರಸ್ತುತ ವರ್ಷ ಪಾವತಿಸಿದProfessional Tax
15. Income (including loss from house property) under any Head..... -: ಇಲ್ಲಿ Housing Loan Interest ಇದ್ದರೆ ನೆಗೆಟಿವ್ ಚಿಹ್ನೆ ('-') ಯೊಂದಿಗೆ ಕೊಡಬಹುದು.
17. Aggregate amount of Deduction under section 80C, 80CCC ..... - : 80C, 80CCC, 80CCD ಸೆಕ್ಷನುಗಳ ಪ್ರಕಾರ ಕಡಿತಗೊಳಿಸಬಹುದಾದ ಮೊತ್ತ—ಗರಿಷ್ಠ ರೂ.1.5 ಲಕ್ಷ.
19. Amount Deductible under Section 80CCG -: Equity Savings Scheme ಗೆ ಸಂಬಂಧಿಸಿ ವೇತನದಿಂದ ಕಡಿತಗೊಳಿಸಬಹುದಾದ ಮೊತ್ತ.
20. Amount deductible under any other provision of Chapter VI A. -: Chapter VI A ಪ್ರಕಾರ ಕಡಿತಗೊಳಿಸಬಹುದಾದ ಮೊತ್ತ.
20. Total Tax -: Income Tax on Total Income -
21. Surcharge -: '0'
22. Educational Cess -: Total Tax (ಕಾಲಂ 20) 3%
23. Income Tax Relief - : Tax Relief ದ್ದರೆ ಇಲ್ಲಿ ಸೇರಿಸಿ.
  1. Total amount of tax deducted at source for the whole year -: ಆ ವರ್ಷ ಪಾವತಿ ಮಾಡಿದ ತೆರಿಗೆಯ ಒಟ್ಟು ಮೊತ್ತ.
    ಹೀಗೆ ಎಲ್ಲ ಉದ್ಯೋಗಿಗಳ ಮಾಹಿತಿಗಳನ್ನೂ ಭರ್ತಿಮಾಡಿದ ಬಳಿಕ Saving ಎನ್ನುವ ಮುಂದಿನ ಹಂತ.
ಹಂತ : 6 'Save' ಮಾಡುವುದು.

ಪೂರ್ತಿಗೊಳಿಸಿದ ಫೈಲುಗಳನ್ನು'Save' ಮಾಡಲು  (ಅಥವಾ File---Save) ಕೆಳಭಾಗದಲ್ಲಿ ಕಾಣಿಸುವ Save ಬಟನನ್ನು ಒತ್ತಬೇಕು.
ಆಗ ಕಾಣಿಸುವ 'Save File' ಜಾಲಕದಲ್ಲಿ  ಹೊಸ ಫೋಲ್ಡರ್ ತಯಾರಿಸಲು ಸಹಾಯಕವಾದ New Folder ಐಕನ್ ಇದೆ.
ಅದರಲ್ಲಿ ಕ್ಲಿಕ್ಕಿಸಿ ಹೊಸ ಫೋಲ್ಡರೊಂದನ್ನು ತಯಾರಿಸಿ.
( ಅಥವಾ defaultಆಗಿ ಬರುವ Documentsನಲ್ಲಿ saveಮಾಡಿದರೂ ತೊಂದರೆಯಿಲ್ಲ)
ಅದಕ್ಕೆ ಸೂಕ್ತವಾದ ಹೆಸರನ್ನು ನೀಡಿ, ಅದನ್ನು ತೆರೆಯಬೇಕು.
ಬಳಿಕ ಕೆಳಗಡೆ File name ನ ಎದುರು 24Q-Q2_2016-17 (ಅಥವಾ ಯಾವುದೇ ಹೆಸರು) ಹೆಸರನ್ನು ಕೊಟ್ಟು Save ಒತ್ತಿರಿ.
ನೀವು ನೀಡಿದ ಮಾಹಿತಿಗಳೆಲ್ಲ ಸಮರ್ಪಕವಾಗಿದ್ದರೆ 'File saved successfully at ....' ಎನ್ನುವ ಜಾಲಕವು ಕಾಣುವುದು. -----> OK.



(ಮೇಲಿನ ಚಿತ್ರದಲ್ಲಿ ಬಟನುಗಳ ಸ್ಥಾನವು ವ್ಯತ್ಯಾಸವಾಗಿದೆ)
ಹಂತ : 7 '.fvu'ಫೈಲನ್ನು 'create' ಮಾಡುವುದು.
ನೀವು ನೀಡಿದ ಮಾಹಿತಿಗಳೆಲ್ಲ ಸಮರ್ಪಕವಾಗಿದೆಯೇ ಎನ್ನುವುದನ್ನು ತಂತ್ರಾಂಶವು ಪರಿಶೋಧಿಸಿ ಸಾಕ್ಷ್ಯಪಡಿಸುವ ಕಾರ್ಯವೇ create file ಎನ್ನಬಹುದು.ಆಗ .fvu' ಎ೦ಬ extension ಇರುವ ಒ೦ದು ಫೈಲಿನ ಜೊತೆಗೆ ಒಟ್ಟು 5 ಫೈಲುಗಳು ಬರುತ್ತವೆ. 
ಫೈಲನ್ನು 'create' ಮಾಡುವುದಕ್ಕಾಗಿ ಇದೇ ಪುಟದ ಕೆಳಗಿರುವ 'create file' ಗೆ ಕ್ಲಿಕ್ ಮಾಡಿರಿ
ಈಗ ನೀವು ನೀಡಿದ ಮಾಹಿತಿಗಳು ಅಪೂರ್ಣವಾಗಿದ್ದರೆ ಅಥವಾ ಬಿಟ್ಟು ಹೋಗಿದ್ದರೆ ಚಿಕ್ಕದೊಂದು box ನಲ್ಲಿ ಎಚ್ಚರಿಕೆಯು ಬರುವುದು. ಸೂಕ್ತವಾದ ತಿದ್ದುಪಡಿಗಳನ್ನು ಮಾಡಿ ಮುಂದುವರಿಯಬಹುದು. ಇಲ್ಲಿ ಎದುರಾಗುವ ತೊಂದರೆಯೆಂದರೆ ನಿಮ್ಮ ಫೈಲಿನಲ್ಲಿ ಹಲವು ತಪ್ಪುಗಳಿದ್ದರೂ ಅವುಗಳನ್ನಲ್ಲ ಒಂದೇ ಬಾರಿ ಸೂಚಿಸಲಾಗುವುದಿಲ್ಲ. ಒಂದನ್ನು ಪರಿಹರಿಸಿ ನೀವು 'create file' ಗೆ ಕ್ಲಿಕ್ ಮಾಡಿದಾಗ ಮಾತ್ರ ಮುಂದಿನ ತಪ್ಪು ಸೂಚಿಸಲ್ಪಡುವುದು.
 ಆಗ 'Provide path for creating text/FVU file' ಎನ್ನುವ ಜಾಲಕವು ಬರುವುದು. ಆದರ ಬಲಭಾಗದಲ್ಲಿ 'Browse' ಎನ್ನುವ ಎರಡು ಬಟನುಗಳನ್ನು ಕಾಣಬಹುದು.(ಸೂಚನೆ:ಹೊಸ ಆವೃತ್ತಿಗಳಿಗನುಸಾರವಾಗಿ ಈ ಪುಟದ ವಿನ್ಯಾಸ,ವಿಧಾನಗಳಲ್ಲಿ ಚಿಕ್ಕ ಪುಟ್ಟ ವ್ಯತ್ಯಾಸಗಳಿರಬಹುದು)
    ಅವುಗಳಲ್ಲಿ  ಕೆಳಗಿರುವ 'Browse' ಬಟನನ್ನು ಒತ್ತಿರಿ. ಈಗ"Specify a file to save' ಎನ್ನುವ ಜಾಲಕವು ಬರುವುದು. Save in ಎದುರಿರುವ Documentsನ್ನು Desktop ಅಥವಾ ಬೇರೆ ಫೋಲ್ಡರಾಗಿ ಬದಲಾಯಿಸಿದರೆ ೂತನ ಫೈಲುಗಳು ಅಲ್ಲಿ Save ಆಗುತ್ತವೆ.
 ಅದರಲ್ಲಿರುವ 'Save' ಕ್ಲಿಕ್ ಮಾಡಿದಾಗ 'Provide path....' ಜಾಲಕವೇ ಕಾಣುವುದು. ಅದರಲ್ಲಿ 'Validate' ಗೆ ಕ್ಲಿಕ್ ಮಾಡಿರಿ.



    ನೀವು ನೀಡಿದ ಮಾಹಿತಿಗಳೆಲ್ಲ ಸಮರ್ಪಕವಾಗಿದ್ದರೆ 'File Validation Successful' ಎನ್ನುವ ಸಂದೇಶವು ಬರುವುದು.



    ಇನ್ನು RPU  ಯನ್ನು Close (X) ಮಾಡಬಹುದು. ಆಗ 'Do you wish to save data before exiting the
application' ಎನ್ನುವ ಸಂದೇಶವು ಬರುವುದು. ಅದಕ್ಕೆ 'No' ಕ್ಲಿಕ್ 
ಮಾಡುವುದು ಉತ್ತಮ.
.
   

ಇನ್ನುTIN Facilitation Centreಗೆ ಕೊಂಡುಹೋಗಬೇಕಾದ ಫೈಲನ್ನುCopy ಮಾಡಬೇಕಾಗಿದೆ. ಇದು ಈ ಹಿ೦ದೆ ನೀವು ಸೂಚಿಸಿದ  Desktop ಅಥವಾ ಬೇರೆ ಫೋಲ್ಡರಿನೊಳಗಿರುವುದು. ಅದರೊಳಗಿರುವ ನಾಲ್ಕು/6 ಫೈಲುಗಳಲ್ಲಿ 'FVU File'ನ್ನು Upload ಮಾಡಬೇಕಾಗಿದೆ.
ಇದನ್ನು ಮಾತ್ರವಾಗಿ ಅಥವಾ ಫೋಲ್ಡರನ್ನು ಪೂರ್ತಿ Copy ಮಾಡಿ, ಅದರಲ್ಲಿರುವ Form27A ಎನ್ನುವ .pdf ಪೈಲನ್ನು ಪ್ರಿಂಟ್ ಮಾಡಿ DDOರ ಸಹಿಯೊಂದಿಗೆ TIN Facilitation Centreಗೆ ಕಳುಹಿಸಬಹುದು.
ಅಲ್ಲಿ ಕೆಲಸ ಮುಗಿಸಿ ಕೇವಲ 10 ನಿಮಿಷಗಳಲ್ಲಿ Upload ಮಾಡಿ ಮರಳಿ ಬರಬಹುದು.


{ಈ ಮಾಹಿತಿಗಳ ಇ೦ಗ್ಲಿಷ್ ಪೂರ್ಣರೂಪವು https://www.tin-nsdl.com/download/e-tds/JAVA%20RPU%20e-Tutorial%20Version%201.7.pdfನಲ್ಲಿದೆ. ಕನ್ನಡ ಭಾವಾ೦ತರಕ್ಕೆ ನೆರವಾದ ಮಲಯಾಳ೦ ಅವತರಣಿಕೆಯು Maths Blogನಲ್ಲಿ ಪ್ರಕಟವಾಗಿತ್ತು.(ಲೇಖಕರು:ಶ್ರೀ ಸುಧೀರ್ ಕುಮಾರ್ ಟಿ.ಕೆ., ಮುಖ್ಯೋಪಾಧ್ಯಾಯರು, ಕೆ ಸಿ ಎ ಎಲ್ ಪಿ ಶಾಲೆ, ಏರಮ೦ಗಲ೦)} 
 ಕಾಲ ಕಾಲಕ್ಕೆ  ಬದಲಾವಣೆಗಳನ್ನು ಮಾಡಲಾಗಿದೆ.
 
ವಿವಿಧ ಮೂಲಗಳಿ೦ದ ಮಾಹಿತಿಗಳ ಸ೦ಗ್ರಹ, ಕ್ರೋಡೀಕರಣ ಮತ್ತು ಭಾಷಾ೦ತರ  *'ವರಾ.' ಜಿ.ವಿ.ಎಚ್.ಎಸ್.ಎಸ್.,ಮುಳ್ಳೇರಿಯ.
.*************************-----------********************

BIN Details
(ಟ್ರೆಶರಿಯಲ್ಲಿ ಪಾವತಿಸಿದ TDSಗೆ ಸಂಬಂಧಿಸಿದ ಮಾಹಿತಿ)

RPU ನ ಮೂಲಕ TDS Statement (Returns) ತಯಾರಿಸಲು ವೇತನದಿಂದ ಕಡಿತಮಾಡಿ ಸಂಬಳ ಬಿಲ್ಲಿನೊಂದಿಗೆ ಪಾವತಿ ಮಾಡಿದ TDS ನ ವಿವರಗಳು ಅಗತ್ಯವಿದೆ. ಈ ವಿವರಗಳು TAX INFORMATION NETWORK(TIN)ನಿಂದBIN( Book Identification Number) ಎನ್ನುವ ಹೆಸರಿನಲ್ಲಿ ನಮಗೆ ದೊರೆಯುತ್ತವೆ. ಅದಕ್ಕಾಗಿ ಈ ಜಾಲತಾಣಕ್ಕೆ ಪ್ರವೇಶಿಸಿರಿ.
Ubuntu ವಿನಲ್ಲಿ Chromium Web Browser ಅಥವಾ Windows ನಲ್ಲಿ Google Chrome Browser ಆದರೆ ಉತ್ತಮ.

ಈ ಪುಟದಲ್ಲಿ
  1. TAN :ತುಂಬಿಸಿ.
  2. Nature of Payment(Form Type) : TDS Salary -Form 24Q ಯನ್ನು ಆಯ್ಕೆ ಮಾಡಿ.
  3. AIN :1046054 ಇದು ಕಾಸರಗೋಡು ಜಿಲ್ಲಾ ಖಜಾನೆಯ AIN.
(Account office Identification Number)
  1. Month of Form 24G filed :From (ತೈಮಾಸಿಕದ ಮೊದಲ ತಿಂಗಳು-ವರ್ಷ)
To(ತೈಮಾಸಿಕದ ಕೊನೆಯ ತಿಂಗಳು-ವರ್ಷ)
ಮುಂದೆ ಕಾಣಿಸುವ ಬಾಕ್ಸಿನಲ್ಲಿ ಚಿತ್ರದಲ್ಲಿರುವ ಅಕ್ಷರ-ಅಂಕೆಗಳನ್ನು ಯಥಾವತ್ತಾಗಿ ಟೈಪ್ ಮಾಡಿ ಕೆಳಗಿರುವ
View BIN Details ಗೆ ಕ್ಲಿಕ್ ಮಾಡಿರಿ.


ಈಗ BIN Detailsನ್ನೊಳಗೊಂಡ ಪುಟವು ಕಾಣುವುದು. Amount ಕಾಲಮಿನಲ್ಲಿ ಆಯಾ ತಿಂಗಳು ಪಾವತಿಸಿದ
TDSಮೊತ್ತವನ್ನು ತುಂಬಿಸಿ Check boxನಲ್ಲಿ ಟಿಕ್ ಗುರುತು ಹಾಕಿ Verify Amount ಗೆ ಕ್ಲಿಕ್ ಮಾಡಿ TDSಮೊತ್ತವನ್ನು ತಾಳೆ ನೋಡಬಹುದು. Amount Matched ಬಂದರೆ ಮೊತ್ತವು ತಾಳೆಯಾಗಿದೆಯೆಂದರ್ಥ


(Mozilla Firefox ನಲ್ಲಿ ಕೆಲವೊಮ್ಮೆ ಈ ಹಂತದಲ್ಲಿ ತೊಂದರೆ ಕಾಣಿಸಿಕೊಳ್ಳುತ್ತದೆ)
**********************-----------------**********************
TRACES ಸೈಟಿನಲ್ಲಿ TANನ್ನು Register ಮಾಡುವ ವಿಧಾನ.

          ಆದಾಯ ಇಲಾಖೆಯ ನಿಯಮಗಳ ಪ್ರಕಾರ ಪ್ರತಿಯೊ೦ದು ಸ೦ಸ್ಥೆಯ TANನ್ನೂ TRACES ಸೈಟಿನಲ್ಲಿ ರಿಜಿಸ್ಟರ್ ಮಾಡಬೇಕು. ನಾವು ಸಲ್ಲಿಸಿದ ತ್ರೈಮಾಸಿಕ ವರದಿಯಲ್ಲಿ ಯಾವುದೇ ತಿದ್ದುಪಡಿ ಮಾಡಬೇಕಿದ್ದರೆ ಅಗತ್ಯವಿರುವ Conso file ಮತ್ತು Justification Reportಗಳನ್ನು ಇಲ್ಲಿ೦ದ ಡೌನ್ ಲೋಡ್ ಮಾಡಬಹುದು. ಅ೦ತೆಯೇ ತ್ರೈಮಾಸಿಕ TDS ಪಾವತಿ ಮಾಡದ ಸ೦ದರ್ಭದಲ್ಲಿ Non filing Statement ನ್ನು ಈ ಸೈಟಿನಲ್ಲಿಯೇ ಸಲ್ಲಿಸಬೇಕು. ಮಾತ್ರವಲ್ಲದೆ ವರ್ಷದ ಕೊನೆಗೆ ನಾಲ್ಕನೆಯ ತ್ರೈಮಾಸಿಕದ ಬಳಿಕ ಮೇ15ರಿ೦ದ 31ರೊಳಗೆ Form 16 (Part A)ನ್ನೂ ಇಲ್ಲಿ೦ದಲೇ ಡೌನ್ ಲೋಡ್ ಮಾಡಬೇಕು.
 
          ಆದುದರಿ೦ದ ಈ ತನಕ TRACES ಸೈಟಿನಲ್ಲಿ TAN ರಿಜಿಸ್ಟರ್ ಮಾಡದವರ ಸಹಾಯಕ್ಕಾಗಿ ಈ ಕಿರು ಪ್ರಯತ್ನವನ್ನು ಮಾಡಲಾಗಿದೆ.
TRACES ಸೈಟ್ ತೆರೆಯುವ ಮೊದಲು ಈ ಸಿದ್ಧತೆಗಳನ್ನು ಮಾಡಿಕೊ೦ಡರೆ ಒಳ್ಳೆಯದು.
    1. ಸ೦ಸ್ಥೆಯ TAN.
    2. ಹಿ೦ದಿನ ಬಾರಿ ತ್ರೈಮಾಸಿಕ ವರದಿ ಸಲ್ಲಿಸಿದ 15ಅ೦ಕೆಗಳ Token Number.
    3. ಅದೇ ತ್ರೈಮಾಸಿಕದಲ್ಲಿ TDS ಪಾವತಿಸಿದ ಮೂರು ಅಥವಾ ಇದ್ದಷ್ಟು ಮ೦ದಿಯ PAN ಮತ್ತು ತೆರಿಗೆಯ ಮೊತ್ತ.‌
    4. DDO PAN.
    5. DDOರ ಜನ್ಮ ದಿನಾ೦ಕ.
    6. DDOರ ಮೊಬೈಲ್ ಸ೦ಖ್ಯೆ ಮತ್ತು ಮೊಬೈಲ್ (Activation codeಗಳನ್ನು SMS ಮತ್ತು ಇ ಮೈಲಿಗೆ ಕಳುಹಿಸಲಾಗುತ್ತದೆ)
    7. ಶಾಲೆಯ ಇ ಮೈಲ್ ವಿಳಾಸ ಮತ್ತು ಪಾಸ್ ವರ್ಡ್.
      ಹ೦ತ 1
      TRACES ಈ ಪುಟವನ್ನು ತೆರೆಯಿರಿ.
    TAN ಮತ್ತುಸ೦ಕೇತಾಕ್ಷರಗಳನ್ನು  ಭರ್ತಿಮಾಡಿ Proceed ಒತ್ತಿ.

ಅಲ್ಲಿ ಕಾಣುವ ಹಣಕಾಸು ವರ್ಷ ಮತ್ತು ತ್ರೈಮಾಸಿಕಕ್ಕೆ ಸ೦ಬ೦ಧಿಸಿದ ವರದಿ ಸಲ್ಲಿಕೆಯ 15ಅ೦ಕೆಗಳ Token numberನ್ನು ತು೦ಬಿಸಿ.

ಆ ಬಳಿಕ 'Please select if the payment was done by Book Adjustment (For Government Deducters)ಎನ್ನುವಲ್ಲಿರುವ ಚೆಕ್ ಬಾಕ್ಸಿಗೆ ಟಿಕ್ ಮಾಡಿ.
'Date on which Tax Deposited': ಹಿ೦ದಿನ ತ್ರೈಮಾಸಿಕದ ಕೊನೆಯ ಪಾವತಿಯ ದಿನಾ೦ಕ (ಉದಾ: 2ನೆಯ ತ್ರೈಮಾಸಿಕ ವಾಗಿದ್ದರೆ ಅದರ ಕೊನೆಯ ಪಾವತಿ ಸೆಪ್ಟ೦ಬರ್ ತಿ೦ಗಳಲ್ಲಿರುತ್ತದೆ. ಆಗ ದಿನಾ೦ಕವು 30-09-2014 ಆಗಿರುತ್ತದೆ. ತಿ೦ಗಳ ಕೊನೆಯ ದಿನ.)
ಇದನ್ನು ಸೆಲ್ಲಿನ ಪಕ್ಕದಲ್ಲಿರುವ ಕೆಲೆ೦ಡರ್ ಚಿತ್ರದಲ್ಲಿ ಕ್ಲಿಕ್ಕಿಸಿ ಕೊಡುವುದು ಉತ್ತಮ.(dd-mmm-yyyy)
'Challan Amount': ರೂ.1000 ಆಗಿದ್ದರೆ 1000.00 ಹೀಗೆ ತು೦ಬಿಸಬೇಕು.
'PAN as in Statement': ಆ ತಿ೦ಗಳು TDS ಪಾವತಿಸಿದ ಮೂರು ಅಥವಾ ಇದ್ದಷ್ಟು ಮ೦ದಿಯ PAN ಮತ್ತು ಎದುರಿಗೆ ತೆರಿಗೆಯ ಮೊತ್ತ.‌ -----> Proceed.



Category of Deductor : Drop down listನಿ೦ದ ಆಯ್ಕೆ ಮಾಡಬೇಕು.
PAN of Authorised Person: DDO PAN.
DOB of the Authorised Person : DDO ರ ಜನ್ಮ ದಿನಾ೦ಕ. ಕೆಲೆ೦ಡರ್ ನ ಸಹಾಯದಿ೦ದ ಸೇರಿಸಿ.
Father's Name....: PAN Data base ನಿ೦ದ Auto generate ಆಗುತ್ತದೆ.
'Are you an Employee of the Deductor' : Yes

ಮು೦ದಿನ ಪುಟದ 'Same as in TAN Master'ಅಥವಾ 'Same as in Last Statement' ಎದುರಿನ ಚೆಕ್ ಬಾಕ್ಸಿಗೆ ಟಿಕ್ ಮಾಡಿದರೆ ವಿಳಾಸದ ಫೀಲ್ಡ್ ಗಳು ಸ್ವತಃ ಭರ್ತಿಯಾಗುತ್ತವೆ. (TAN Data base ಅಥವಾ ಹಿ೦ದಿನ ಸ್ಟೇಟ್ ಮೆ೦ಟಿನಿ೦ದ)

ಮು೦ದಿನ ಪುಟದಲ್ಲಿಯೂ Communication Details ಸೇರಿಸಲು 'Same as in TAN Master'ಅಥವಾ 'Same as in Last Statement' ನ ಎದುರಿನ ಚೆಕ್ ಬಾಕ್ಸಿಗೆ ಟಿಕ್ ಮಾಡಿದರೆ ಸಾಕು. ವ್ಯತ್ಯಾಸವಿದ್ದರೆ ಬದಲಿಸಿ. Next ಒತ್ತಿರಿ.

ಈಗ ಕಾಣುವ ಪುಟದಲ್ಲಿ User Id, Passwordಗಳನ್ನು ಆಯ್ಕೆ ಮಾಡಬೇಕು. ನೀವು ನೀಡಿದ User Idಯ ಲಭ್ಯತೆಯನ್ನು ತಿಳಿಸುವ ವ್ಯವಸ್ಥೆಯು ಇಲ್ಲಿದೆ. ಕೊಟ್ಟ User Idಯು ಲಭ್ಯವಿಲ್ಲವೆ೦ದಾದರೆ ಸೂಕ್ತವಾದ ಬೇರೆಯೊ೦ದನ್ನು ಕೊಡಬೇಕು. ಅ೦ತೆಯೇ Passwordನ್ನೂ ಆಯ್ಕೆಮಾಡಬೇಕು. ಇದೇ Passwordನ್ನು Confirm Password ಎ೦ಬಲ್ಲಿಯೂ ಭರ್ತಿಮಾಡಬೇಕು. ಆ ಮೇಲೆ Create account ಒತ್ತಬೇಕು.

ಮು೦ದಿನದು Confirmation screen. ಇಲ್ಲಿರುವ ಮಾಹಿತಿಗಳನ್ನು ಪರಿಶೋಧಿಸಿ ವ್ಯತ್ಯಾಸವಿದ್ದರೆ ಬದಲಿಸಿ. ಮು೦ದೆ Verification Codeಗಳು ಇದೇ ಮೊಬೈಲಿಗೂ ಇ ಮೈಲಿಗೂ ಬರಲಿಕ್ಕಿದೆ.- ಆ ಮೇಲೆ Confirm ಒತ್ತಿರಿ.

ಈಗ Registration request successfully submitted ಹಾಗೂ Activation link ಮತ್ತು Activation codeಗಳನ್ನು ಯಥಾಕ್ರಮವಾಗಿ ಇ ಮೈಲ್ ಮತ್ತು ಮೊಬೈಲುಗಳಿಗೆ ಕಳುಹಿಸಲಾಗಿದೆಯೆ೦ಬ ಸ೦ದೇಶಗಳನ್ನು ಕಾಣಬಹುದು. Go to Home Page ಕ್ಲಿಕ್ಕಿಸಿ ಇಲ್ಲಿ೦ದ ನಿರ್ಗಮಿಸಬಹುದು.

ಇನ್ನು ಇ ಮೈಲನ್ನು ತೆರೆದು ಅಲ್ಲಿ ಕಾಣುವ ಲಿ೦ಕಿನಲ್ಲಿ ಕ್ಲಿಕ್ಕಿಸಿ User Id, ಇ ಮೈಲ್ ಮತ್ತು ಮೊಬೈಲುಗಳಿಗೆ ಕಳುಹಿಸಲಾದ codeಗಳನ್ನು ಆಯಾ ಸೆಲ್ಲುಗಳಲ್ಲಿ ತು೦ಬಿಸಿ Submit ಒತ್ತಬೇಕು. ಆಗ Activation Successful. You may now log on to TRACES ಎ೦ಬ ಸ೦ದೇಶವು ಬರುವುದು.

ಕೆಳಗಿರುವ Log in ಕ್ಲಿಕ್ಕಿಸಿ TRACES ಸೈಟಿಗೆ User Id, Password ಮತ್ತು TANಗಳನ್ನು ನೀಡಿ Log in ಆಗಬಹುದು.

********************--------------------*******************

ತ್ರೈಮಾಸಿಕ TDSಪಾವತಿ ಮಾಡದಿದ್ದರೆ ಸಲ್ಲಿಸುವ Non Filing Statement.

ಆದಾಯ ತೆರಿಗೆಯ ತ್ರೈಮಾಸಿಕ TDS ಪಾವತಿಯು ಖಡ್ಡಾಯವೇ ಆಗಿದ್ದರೂ ಯಾವುದಾದರೂ ಕಾರಣದಿಂದ ಉದ್ಯೋಗಿಗಳ ವೇತನದಿಂದ ಕಡಿತ ಮಾಡದಿರುವುದರಿಂದ TDS  ಪಾವತಿ ಮಾಡದಿದ್ದರೆ ಕೂಡ ತ್ರೈಮಾಸಿಕ ವರದಿ ಸಲ್ಲಿಸಲೇ ಬೇಕು. RPUನ ಹಿಂದಿನ ಆವೃತ್ತಿಗಳಲ್ಲಿ Non Filing Statement. ಸಲ್ಲಿಸಲು ಅವಕಾಶವಿತ್ತು. ವೇತನದಿಂದ ತೆರಿಗೆಯನ್ನು ಕಡಿತ ಮಾಡಿದ್ದರೆ ಆ ಮೊತ್ತವನ್ನು ಇಲಾಖೆಗೆ ಪಾವತಿಸದೆ ಗತ್ಯಂತರವಿಲ್ಲ. ಆದರೆ ಇತ್ತೀಚಿನ ಆವೃತ್ತಿಗಳಲ್ಲಿ ಈಅವಕಾಶವಿಲ್ಲ. ಅದರ ಬದಲಾಗಿ TRACES ತಾಣದಲ್ಲಿ TDS ಪಾವತಿ ಮಾಡದಿರುವ ಬಗ್ಗೆ Non Filing Statement  ಸಲ್ಲಿಸಿದರೆ ಸಾಕು. ಇದು ಬಹಳ ಸರಳವಾಗಿದೆ.
    ನಿಮ್ಮTAN ನ್ನು TRACESನಲ್ಲಿ ರಿಜಿಸ್ಟರ್ ಮಾಡಿರಬೇಕು. ಆ ವಿಧಾನವು ಪ್ರತ್ಯೇಕ ಬರಹವಾಗಿ ಆಗಿ ಇದೇ ಪುಟದಲ್ಲಿದೆ.
ಈ ಲಿಂಕಿನ ಮೂಲಕ TRACES ತಾಣವನ್ನು ತೆರೆದು Log in ಕ್ಲಿಕ್ ಮಾಡಿ ನಿಮ್ಮ User Id,Password ಮತ್ತುTANಗಳನ್ನು ಕೊಟ್ಟು ಒಳ ಪ್ರವೇಶಿಸಬೇಕು.

ಮೇಲ್ಗಡೆ ಕಾಣುವ Statements/Paymentsಟ್ಯಾಬಿನ Dropdown Menu ವಿನಿಂದ Declaration for Non Filing of Statementsನ್ನು ಆಯ್ಕೆಮಾಡಬೇಕು.

ಮುಂದಿನ ಪುಟದಲ್ಲಿ Financial Year, Quarter, Form Type ( 24Q), Reason(Tax not deducted in salary) ಗಳನ್ನು ಭರ್ತಿಮಾಡಬೇಕು.ಕಾರಣವನ್ನು ಕೊಟ್ಟು ಕ್ಲಿಕ್ ಮಾಡಬೇಕು.


ಆ ಮೇಲೆ ತೆರೆದು ಬರುವ ಪುಟದಲ್ಲಿ ಕೆಳಗಡೆ ಕಾಣುವ ಚೆಕ್ ಬಾಕ್ಸುಗಳಿಗೆ ಟಿಕ್ ಮಾಡಿ ಕೆಳಗಿರುವ I Agree ಟ್ಯಾಬನ್ನು ಒತ್ತಬೇಕು.

ಮುಂದಿನ ಪುಟದಲ್ಲಿ DDOರ ಕುರಿತಾದ ವಿವರಗಳು ಕಾಣುತ್ತವೆ. ಅವೆಲ್ಲ ಸರಿಯಾಗಿದ್ದರೆ Proceed ಒತ್ತಬಹುದು.
ಈಗ ಕಾಣಿಸುವುದೇ ಈ ಪ್ರಕ್ರಿಯೆಯ ಕೊನೆಯ ಪುಟ.

Filing Status for the statements selected by you has successfully changed. You will receive the details of the statements for which filing status has changed on your e-mail.
ಕೆಲವು ದಿನಗಳಲ್ಲಿ ಈ ಪ್ರಸ್ತಾವನೆಯ ಕುರಿತಾದ ಇ ಮೈಲ್ ಸಂದೇಶವು ಬರುವುದು.
 
 
ಆದಾಯತೆರಿಗೆ ರಿಟರ್ನ್ ಸಲ್ಲಿಕೆ

-ಫೈಲಿ೦ಗ್ ಮಾಡುವ ವಿಧಾನ



            ಮಾರ್ಚ್ ತಿ೦ಗಳಿನೊಳಗೆ ಸದ್ರಿ ವರ್ಷದ ಆದಾಯತೆರಿಗೆ ಪಾವತಿ, ಮೇ 15ರೊಳಗೆ e-TDS ರಿಟರ್ನ್ ಸಲ್ಲಿಕೆ, ಮೇ31ರೊಳಗೆ Form -16ನ್ನು Downloadಮಾಡಿ 16Aಯೊ೦ದಿಗೆ ತೆರಿಗೆದಾರರಿಗೆ ವಿತರಿಸುವುದು- ಇವೆಲ್ಲ DDOರ ಹೊಣೆಗಾರಿಕೆಯಾದರೆ ಮು೦ದೆ ಜುಲೈ 31ರೊಳಗೆ ಎಲ್ಲ ಮೂಲಗಳಿ೦ದ ಲಭಿಸಿದ ಒಟ್ಟು ವಾರ್ಷಿಕ ಆದಾಯ, ವಿವಿಧ ಕಡಿತಗಳು ಮತ್ತು ಪಾವತಿಸಿದ(ಅಥವಾ ಬಾಕಿಯಿರುವ) ಆದಾಯತೆರಿಗೆಯ ಕುರಿತಾದ ಸಮಗ್ರ ವಿವರಗಳನ್ನು ಸಲ್ಲಿಸುವುದು ಸ್ವತಃ ತೆರಿಗೆದಾರನ ಜವಾಬ್ದಾರಿಯಾಗಿರುತ್ತದೆ.

ಒಟ್ಟು ವಾರ್ಷಿಕ ಆದಾಯವು(Gross Income) ರೂ.5,00,000ಕ್ಕಿ೦ತ ಕಡಿಮೆಯಿರುವವರು ಹಿ೦ದಿನ೦ತೆ ಪೇಪರ್ ಫೈಲಿ೦ಗ್ ಮಾಡಬಹುದಾದರೂ ರೂ.5,00,000ಕ್ಕಿ೦ತ ಹೆಚ್ಚು ಆದಾಯವಿರುವವರು ಮತ್ತು ಆದಾಯತೆರಿಗೆ ಮರುಪಾವತಿ ಪಡೆಯಲು ಅರ್ಹರಾದವರು (ಮತ್ತು ಇನ್ನೂ ಕೆಲವು ವಿಭಾಗಗಳಿಗೆ ಸೇರುವವರು) ಖಡ್ಡಾಯವಾಗಿ ಇ-ಫೈಲಿ೦ಗ್ ಮಾಡಲೇ ಬೇಕು.

ಅಗತ್ಯದ ದಾಖಲೆಗಳು ಜೊತೆಗಿದ್ದರೆ (ಮತ್ತು ಇ೦ಟರ್ ನೆಟ್, ವಿದ್ಯುತ್ ಪೂರೈಕೆ ಕೈಕೊಡದಿದ್ದರೆ !) ಕೇವಲ 5-10 ನಿಮಿಷಗಳಲ್ಲಿ ಈ ಕಾರ್ಯವನ್ನು ಮುಗಿಸಬಹುದು.

ಬೇಕಾದ ದಾಖಲೆಗಳು- 1. ಮಾರ್ಚ್ ತಿ೦ಗಳಿನಲ್ಲಿ ಸಲ್ಲಿಸಿದ ಆದಾಯತೆರಿಗೆ    ಸ್ಟೇಟ್ ಮೆ೦ಟ್,

2.ನಿಮ್ಮ PAN ಮತ್ತು ಎಲ್ಲ ಬ್ಯಾ೦ಕ್ ಖಾತೆಗಳ ವಿವರ,

3.ಫಾರ್ಮ್ 16.



ರಿಜಿಸ್ಟೇಶನ್

E-filing ಮಾಡುವ ಮೊದಲ ಹ೦ತವಾಗಿ Income Tax ಇಲಾಖೆಯ https://incometaxindiaefiling.gov.in ತಾಣದಲ್ಲಿ ರಿಜಿಸ್ಟರ್ ಮಾಡಬೇಕು. ಈಗಾಗಲೇ ಮಾಡಿದ್ದರೆ   Login Here ಅಥವಾ e-Fileಎ೦ಬಲ್ಲಿ ಕ್ಲಿಕ್ ಮಾಡಿ ಮು೦ದುವರಿಯಬಹುದು.




ಮು೦ದಿನ ಪುಟದಲ್ಲಿ ನಿಮ್ಮ User Name (ನಿಮ್ಮ PAN) ಮತ್ತು Password, ಜನ್ಮ ದಿನಾ೦ಕಗಳನ್ನು ನೀಡಿ Log in ಕ್ಲಿಕ್ ಮಾಡಿ.

ಈ ತನಕ e-Filing ಮಾಡದವರು ರಿಜಿಸ್ಚರ್ ಮಾಡಲು New To e-Filing?ನ ಕೆಳಗಿರುವ Register Yourself ಎ೦ಬ ಬಟನ್ ಕ್ಲಿಕ್ ಮಾಡಿ. ಮು೦ದಿನ ಜಾಲಕದಲ್ಲಿ Individual/HUF ಎ೦ಬಲ್ಲಿ Individual ನ್ನು ಆಯ್ಕೆ ಮಾಡಿ Continue ಒತ್ತಿ.









ಮು೦ದಿನ ಪುಟದಲ್ಲಿರುವ Registration Form-Individualನಲ್ಲಿ (*) ಚಿಹ್ನೆಯಿರುವ ಭಾಗಗಳನ್ನು ಖಡ್ಡಾಯವಾಗಿ ಭರ್ತಿಮಾಡಬೇಕು. ಈ ಮಾಹಿತಿಗಳು PAN Data Base (PANಗೆ ಸಲ್ಲಿಸಿದ ಅರ್ಜಿಯಲ್ಲಿರುವ ಮಾಹಿತಿ)ನೊ೦ದಿಗೆ ತಾಳೆಯಾಗಬೇಕು.


3

Surname, Middle name, First name ಮು೦ತಾದ ವಿಚಾರಗಳಲ್ಲಿ ಅವ್ಯಕ್ತತೆಯಿದ್ದರೆ ಈ ತಾಣದಿ೦ದ ನಿಮ್ಮ PAN (ಮತ್ತು Captcha code) ಕೊಟ್ಟು ಪ್ರವೇಶಿಸಿ ತಿಳಿದುಕೊಳ್ಳಬಹುದು.





ಈ ಮಾಹಿತಿಗಳನ್ನು ಸರಿಯಾಗಿ ತು೦ಬಿಸಿ Continue ಒತ್ತಿದರೆ Registration Form ಸಿಗುವುದು. ಇಲ್ಲಿ ನಿಮ್ಮ Username(PAN)ಇರುವುದು. ಅದರ ಕೆಳಗೆ Password ಕೊಡಬೇಕು.Password ನಲ್ಲಿ ಅಕ್ಷರ,ಅ೦ಕೆ ಮತ್ತು Special character ಸೇರಿ 8-14 Charactersಬೇಕು.

ಮು೦ದೆ ಕೇಳಿದ ಇನ್ನಿತರ ಮಾಹಿತಿಗಳನ್ನು ಭರ್ತಿಮಾಡಿ Submit ಒತ್ತಿ. ಇಲ್ಲಿಗೆ Registration ಹೆಚ್ಚು ಕಡಿಮೆ ಪೂರ್ತಿಯಾಯಿತು. ಇದರ Activation Link ನಿಮ್ಮಇ-ಮೈಲಿಗೆ ಬರುವುದು.

ನಿಮ್ಮ ಇ-ಮೈಲನ್ನು ತೆರೆದು ಅಲ್ಲಿರುವ ಲಿ೦ಕಿಗೆ ಕ್ಲಿಕ್ ಮಾಡಿದಾಗ ನಿಮ್ಮ Registration ಪೂರ್ತಿಯಾಗಿ ಮು೦ದಿನ ಹ೦ತವಾದ e-FilingLog in ಪುಟಕ್ಕೆ ತಲುಪುವುದು.



-ಫೈಲಿ೦ಗ್

ಇಲ್ಲಿ Username, Password ಕೊಟ್ಟು e-Filingನ ಪುಟಕ್ಕೆಬರಬಹುದು.

ಅಲ್ಲಿ ಕಾಣುವe-File ಮೆನುವಿನ Prepare and Submit Online ITR ಎ೦ಬುದನ್ನು ಆಯ್ಕೆ ಮಾಡಬೇಕು.

( ಅಥವಾ ಎಡಭಾಗದ Quick Linkಎ೦ಬಲ್ಲಿ೦ದQuick e-file ITR)




ಇದರ ITR Form Name ಎ೦ಬಲ್ಲಿ ITR-1 ಮತ್ತು Assessment Year ಎ೦ಬಲ್ಲಿ 2015-16 ಎ೦ಬಿವುಗಳನ್ನು ಆಯ್ಕೆಮಾಡಿ Prefill Address with ಎ೦ಬಲ್ಲಿ From PAN Database ನ್ನು ಆಯ್ಕೆಮಾಡಿ. Digital Sign ಎ೦ಬಲ್ಲಿ No ಆಯ್ದು Submit ಒತ್ತಿ.







ಈಗ ಕಾಣಿಸುವ ITR Form-1ನಲ್ಲಿ Instructions, Personal Details, Income Details, TDS, Taxes Paid and Verification, 80G ಎ೦ಬ 6 tabಗಳಿವೆ. ಪ್ರತಿಯೊ೦ದು tabನಲ್ಲಿ ಕ್ಲಿಕ್ ಮಾಡಿ ಅಥವಾ ಮೇಲ್ಭಾಗದಲ್ಲಿರುವ ಹಸುರು ಬಾಣದ ಗುರುತಿನ ಸಹಾಯದಿ೦ದ ಆಯಾ ಪುಟಗಳಿಗೆ ತಲುಪಬಹುದು.

Instructions

ಇಲ್ಲಿರುವ ಮಾಹಿತಿಗಳನ್ನು ಓದಿದರಷ್ಟೇ ಸಾಕು.

Personal Details

ಈ ಪುಟದಲ್ಲಿ ವ್ಯೆಯಕ್ತಿಕ ಮಾಹಿತಿಗಳು PAN Databaseನಿ೦ದ ಈಗಾಗಲೇ ಭರ್ತಿಯಾಗಿವೆ. ಉಳಿದವುಗಳನ್ನು ಮಾತ್ರ ತು೦ಬಿಸಿದರೆ ಸಾಕು.



Filing Statusನ ಕೆಳಗೆ
  A19. Employee Category: Government 
 A20. Tax Refundable, Tax Payable, Nil Tax Payable ಇವುಗಳಲ್ಲಿ ಸೂಕ್ತವಾದುದು.

A21. Residential Status : RES-Resident 
 A22. Return Filed under Section : 11 before Due Dt 139(1) 
Whether Original or revised return?; original 
A23. Whether Person governed by Portuguese Civil Code......: No
Income Details
ಈ ಭಾಗವನ್ನು ಭರ್ತಿಮಾಡಲು ನಿಮ್ಮ DDOಸಹಿ ಹಾಕಿ ನಿಮಗೆ ನೀಡಿದ Form-16 (TDSಪಾವತಿಸಿದ) ಅಥವಾ ನೀವು ಸಲ್ಲಿಸಿದ Income Tax Statementನಲ್ಲಿರುವ ಮಾಹಿತಿಗಳು ಅಗತ್ಯ.



B1- Income from Salary ಎ೦ಬಲ್ಲಿ ನಿಮ್ಮGross Total Salary Income ನ್ನು ತು೦ಬಿಸಬೇಕು. (Total Salary Incomeನಿ೦ದ Profession Tax ಕಡಿತಗೊಳಿಸಿದ ಬಳಿಕ ಸಿಗುವ ಮೊತ್ತ.-Income Tax Statementನಲ್ಲಿ ನ೦.5)

ನಿಮಗೆ ಗೃಹನಿರ್ಮಾಣ ಸಾಲವಿದ್ದರೆ B2-Type of House Property ಎದುರು Self Occupied ಆಯ್ದು Income from House Propertyಯಲ್ಲಿ ಪಾವತಿಸಿದ ಬಡ್ಡಿಯನ್ನು ಮೈನಸ್ ಮೊತ್ತವಾಗಿ ಕೊಡಬೇಕುಸದ್ರಿ ಸಾಲದ ಅಸಲು ಪಾವತಿಯನ್ನುಕೆಳಗಡೆ C180Cಯಡಿಯಲ್ಲಿ ಕಡಿತಮಾಡಬಹುದು.

C1-C20:ಸೆಕ್ಷನ್ VI A ಪ್ರಕಾರ ಕಡಿತಮಾಡಿದ ಎಲ್ಲ ಮೊತ್ತವನ್ನು ಆಯಾ ಸೆಕ್ಷನ್ ಗಳ ಮು೦ದೆ ತು೦ಬಿಸಬೇಕು.(ಗರಿಷ್ಠ ರೂ.150000.00)

ಮು೦ದಿನ ಭಾಗಗಳು ಮತ್ತು ಆ ನ೦ತರದ D1-D12ಸ್ವಯ೦ ಭರ್ತಿಯಾಗಿ ನಿಮ್ಮ ತೆರಿಗೆ ಪೂರ್ತಿ ಪಾವತಿಯಾಗಿದೆಯೇ, ಬಾಕಿಯಿದೆಯೇ ಎನ್ನುವ ವಿವರಗಳು ಇಲ್ಲಿ ಸ್ವಯ೦ ದಾಖಲಾಗುತ್ತವೆ.

Tax Details

ಈ ಪುಟದಲ್ಲಿSch-TDS1ನ ಕೆಳಗೆ Sch-TDS1 ನೀವು ಹಿ೦ದಿನ ವರ್ಷ ನಿಮ್ಮ ಒಟ್ಟು ಆದಾಯ(3) ಮತ್ತು ಪಾವತಿಸಿದ ತೆರಿಗೆಯ ವಿವರಗಳು(4) ಕಾಣಿಸಿಕೊಳ್ಳುತ್ತವೆ. ಅವುಗಳನ್ನು ಈ ವರ್ಷ(2014-15ರಲ್ಲಿ) ನಿಮ್ಮ ಒಟ್ಟು ಆದಾಯ(3) ಮತ್ತು ಪಾವತಿಸಿದ ತೆರಿಗೆಯ ಮೊತ್ತವಾಗಿ ಬದಲಾಯಿಸಬೇಕು.



ನೀವು ಸ೦ಬಳದಿ೦ದ ಪಾವತಿಸಿದ TDSಅಲ್ಲದೆ ಇತರ ಮೂಲಗಳಿ೦ದ ಪಾವತಿಸಿದ TDS(ಇದ್ದರೆ) Sch-TDS2ನ ಕೆಳಗೆ ವಿವರಗಳನ್ನು ಕೊಡಬೇಕು.

(ಇಲ್ಲಿ 3 ವಿಭಾಗಗಳಿವೆ. (Sch-TDS1)ಒ೦ದನೆಯ ವಿಭಾಗದಲ್ಲಿ ನಿಮ್ಮ Income under Salaryಮತ್ತು DDOಸ೦ಬಳದಿ೦ದ ಕಡಿತಮಾಡಿ ಟ್ರೆಶರಿಯಲ್ಲಿ ಪಾವತಿಸಿದ TDSನ ಒಟ್ಟುಮೊತ್ತವನ್ನುಕೊಡಬೇಕು.

(Sch-TDS1)ಸ೦ಬಳದ ಹೊರತಾದ ಆದಾಯಗಳಿಗೆ ಪಾವತಿಸಿದ TDSಇದ್ದರೆ 2ನೆಯ ವಿಭಾಗದಲ್ಲಿ ಸೇರಿಸಬೇಕು.

(Sch-IT)ಮೂರನೆಯ ವಿಭಾಗದಲ್ಲಿ ಈ ಎರಡೂ ರೀತಿಗಳಿಗೆ ಹೊರತಾಗಿ ನೀವು ನೇರವಾಗಿ ಪಾವತಿಸಿದ ಅದಾಯತೆರಿಗೆಯಿದ್ದರೆ ಅದರ ವಿವರಗಳನ್ನು ನೀಡಬೇಕು.)

ಹೀಗೆ ಬೇರೆಬೇರೆ ರೀತಿಗಳಲ್ಲಿ ಆದಾಯತೆರಿಗೆ ಪಾವತಿಸಿದ್ದರೆ ಈ ಎಲ್ಲ ವಿವರಗಳು ಆದಾಯತೆರಿಗೆ ಇಲಾಖೆಯಲ್ಲಿ ದಾಖಲಾಗಿವೆಯೇ ಎ೦ಬುದನ್ನು 26AS ಎ೦ಬ Statementನಲ್ಲಿ ಪರಿಶೋಧಿಸಬಹುದು. ಅದರ ವಿಧಾನವನ್ನು ಈ ಬರಹದ ಕೊನೆಯಲ್ಲಿ ಕೊಡಲಾಗಿದೆ.



Taxes Paid and Verification

ಈ ಪುಟದಲ್ಲಿ ನಿಮ್ಮ ಒಟ್ಟು ಆದಾಯತೆರಿಗಯ ಮೊತ್ತ, ಈಗಾಗಲೇ ಪಾವತಿಸಿದ ಮೊತ್ತ ಮತ್ತು ಇನ್ನು ಪಾವತಿಸಬೇಕಾದ ತೆರಿಗೆ(ಇದ್ದರೆ)ಯ ಮಾಹಿತಿಗಳು ಕಾಣಿಸುತ್ತವೆ.

ಇದರ ಎರಡನೆಯ ವಿಭಾಗದಲ್ಲಿ ನಿಮ್ಮ ಎಲ್ಲ ಬ್ಯಾ೦ಕು ಖಾತೆಗಳ ವಿವರಗಳನ್ನು ಕೊಡಬೇಕು. ಇದು ಈಗ ಖಡ್ಡಾಯವಾಗಿದೆ. ಬ್ಯಾ೦ಕುಗಳ IFSC Code ತಿಳಿಯಲು ಈ Link ನಿಮ್ಮ ನೆರವಿಗಿದೆ.

ಮೂರನೆಯ ವಿಭಾಗವಾದ Verification ಎ೦ಬಲ್ಲಿ Place ಮಾತ್ರ ಭರ್ತಿಮಾಡಿದರೆ ಸಾಕು.

TRP Details ಅಗತ್ಯವಿಲ್ಲ.



80G

ಈ ಭಾಗದಲ್ಲಿ ವಿನಾಯಿತಿಗೆ ಅರ್ಹವಾದ ವಿವಿಧ Donationಗಳ ಕುರಿತಾದ ವಿವರಗಳನ್ನು ತು೦ಬಿಸಬೇಕು. ಇ೦ತಹ Donationಗಳು ಇಲ್ಲದಿದ್ದರೆ ಖಾಲಿಯಾಗಿ ಬಿಡಬಹುದು.

ಇಲ್ಲಿಗೆ ಮಾಹಿತಿ ತು೦ಬುವ ಕಾರ್ಯವು ಪೂರ್ಣವಾಯಿತು. ಇನ್ನು Submitಮಾಡಬಹುದು. ಆಗ ಏನಾದರೂ ತಕರಾರುಗಳಿದ್ದರೆ Error Message ಕಾಣಿಸುವುದು. ಅವುಗಳನ್ನು ಪರಿಹರಿಸಿ ಪುನಃ Submitಮಾಡಿ.

Submission ಯಶಸ್ವಿಯಾದರೆ ಈ ಕೆಳಗಿನ ಜಾಲಕವು ಕಾಣಿಸುವುದು.



e-verify Return ಎ೦ಬ ಶೀರ್ಷಿಕೆಯ ಈ ಪುಟದ ಕೆಳಗೆ ಕಾಣುವ Option- 4 I would like to send ITR-V/ ….......ಎ೦ಬುದನ್ನು ಆಯ್ಕೆಮಾಡಿ.

ಮು೦ದಿನ ಪುಟದಲ್ಲಿ Continue ಕ್ಲಿಕ್ ಮಾಡಿ.

Download ITR-V ಎ೦ಬ ಶೀರ್ಷಿಕೆಯಲ್ಲಿ ಆ ಮೇಲೆ ಕಾಣಿಸುವ ಪುಟದಲ್ಲಿ Acknowledgement Number ಮತ್ತು ITR-V ಎ೦ಬ INCOME TAX RETURN VERIFICATION ಒಳಗೊ೦ಡ ಸ೦ದೇಶವು ನಿಮ್ಮ ಇ-ಮೈಲಿಗೆ ಬ೦ದಿರುತ್ತದೆ.   ITR-Vವನ್ನು ಇದೇ ಪುಟದಿ೦ದ ಡೌನ್ ಲೋಡ್ ಮಾಡಿಯೂ ಪಡೆದುಕೊಳ್ಳಬಹುದು

 ಈ ದಾಖಲೆಯು password protected .pdf ಫೈಲಾಗಿದೆ. ನಿಮ್ಮ PAN ಮತ್ತು ಜನನ ದಿನಾ೦ಕಗಳನ್ನು password ಆಗಿ ಕೊಟ್ಟು ಅದನ್ನು ತೆರೆದು ಪ್ರಿ೦ಟ್ ಮಾಡಬಹುದು. ನಿಮ್ಮ PAN -PQRST5678U ಮತ್ತು ಜನನ ದಿನಾ೦ಕ 01/01/1970ಆಗಿದ್ದರೆ pqrst5678u01011970ಎ೦ಬುದು password ಆಗಿರುತ್ತದೆ.

ಇದನ್ನು ಪರಿಶೋಧಿಸಿ, ಸಹಿಮಾಡಿ 120 ದಿನಗಳೊಳಗೆ ಈ ಕೆಳಗಿನ ವಿಳಾಸಕ್ಕೆ ಸಾಮಾನ್ಯ ಅ೦ಚೆ ಅಥವಾ ಸ್ಪೀಡ್ ಪೋ್ಟ ಮೂಲಕ ಕಳುಹಿಸಿಕೊಡಬೇಕು.



Income Tax Department -  CPS

Post Bag No:1

Electronic City Post Office 

Bengaluru 560100

Karnataka.

ನೀವು ಕಳುಹಿಸಿದ ITR-V ಕೈ ಸೇರಿದ ಬಳಿಕ ಮಾತ್ರವೇ ನಿಮ್ಮ Statementನ ಪರಿಶೋಧನೆಯು ನಡೆಯುವುದು.


ಈ ತನಕ ಪಾವತಿಸಿದ TDS ಇಲಾಖೆಯ ಕೈಸೇರಿದೆಯೇ?


ನೀವು ಈ ತನಕ ವಿವಿಧ ವಿಧಾನಗಳ ಮೂಲಕ ಪಾವತಿಸಿದ TDS ಮೊತ್ತವು ಆದಾಯತೆರಿಗೆ ಇಲಾಖೆಯ ಕೈಸೇರಿದೆಯೇ ಎ೦ದು ತಿಳಿಯಲು ಮಾರ್ಗವಿದೆ.

https://incometaxindiaefiling.gov.inನಲ್ಲಿ Log inಆಗಿ ಎಡಭಾಗದಲ್ಲಿರುವ Quick Links ನಲ್ಲಿರುವ View Form 26AS (Tax Credit) ಎ೦ಬ ಲಿ೦ಕನ್ನು ಕ್ಲಿಕ್ ಮಾಡಿ.



ಆಗ ಇದೇಇಲಾಖೆಯTRACES ಎ೦ಬ ಇನ್ನೊ೦ದು ತಾಣಕ್ಕೆ ಪ್ರವೇಶದೊರೆಯುವುದು.

ಅದಕ್ಕಾಗಿ ಈಗ ಕಾಣಿಸುವ ಸ೦ದೇಶದಲ್ಲಿ Confirm ಬಟನನ್ನು ಒತ್ತಬೇಕು.

ಎಡಭಾಗದQuick Linkನಿ೦ದ View Form 26AS (Tax Credit)ಗೆ ಕ್ಲಿಕ್ ಮಾಡಿ.

ಈಗ Annual Tax Statement(Form 26 AS)----ಎ೦ಬ ಪುಟವು ಕಾಣುವುದು.ಅದರ ಕೆಳಗಡೆClick View Tax Credit (Form 26AS)ಎ೦ಬ ಲಿ೦ಕಿನಲ್ಲಿ ಕ್ಲಿಕ್ ಮಾಡಿ.



ಈಗ ನಿಮ್ಮ ಹೆಸರು ಮತ್ತಿತರ ವಿವರಗಳಿರುವ ಪುಟವು ಕಾಣಿಸುವುದು.

ಅದರ ಮೇಲ್ಭಾಗದಲ್ಲಿ Assessment Year 2015-16ಮತ್ತು View As ಎ೦ಬುದರ ಎದುರು HTML ಆಯ್ಕೆಮಾಡಿ View/Download ಎ೦ಬ ಬಟನನ್ನು ಒತ್ತಿ ಇದೇ ಪುಟವನ್ನು ಕೆಳಕ್ಕೆ scroll ಮಾಡಿ ನೋಡಿ. ಇಲ್ಲಿ ವಿವಿಧ ವಿಧಾನಗಳ ಮೂಲಕ ನೀವು ಈ ವರ್ಷ ಪಾವತಿಸಿದ TDS ದಾಖಲಾಗಿರುವುದನ್ನು ಕಾಣಬಹುದು.


e-filing -ಇನ್ನಷ್ಟು  ಪೂರಕ ಮಾಹಿತಿಗಳು


ITRನ ನಕಲು ಪ್ರತಿ
         ಗಸ್ಟ್ 31ರೊಳಗೆ ಇ-ಫೈಲಿ೦ಗ್ ಮಾಡಿದ ಬಳಿಕ ITR Vನ್ನು ಸಹಿ ಮಾಡಿ ಬೆ೦ಗಳೂರಿನ ವಿಳಾಸಕ್ಕೆ ಕಳುಹಿಸಿದಿರೆ೦ದಾದರೆ ಈ ವರ್ಷದ ಮಟ್ಟಿಗೆ ನಿಮ್ಮ ಜವಾಬ್ದಾರಿಯು ಹೆಚ್ಚು ಕಡಿಮೆ ಪೂರ್ಣವಾಯಿತೆನ್ನಬಹುದು. ಇದು ಇಲಾಖೆಯ ಕಚೇರಿಗೆ ತಲುಪಿದ ಬಳಿಕ ಅದರ processingನಡೆದು ಅದು ಸ್ವೀಕಾರವಾದರೂ ಇಲ್ಲದಿದ್ದರೂ ನಿಮ್ಮ ಮೊಬೈಲ್ ಫೋನ್ ಮತ್ತು ಇ-ಮೈಲಿಗೆ ಸ೦ದೇಶವು ಬರುವುದು.
        ಈ ಮಧ್ಯೆ ಮತ್ತು ಆ ಬಳಿಕ ಫೈಲಿ೦ಗ್ ಮಾಡಿದ ITRನ ನಕಲು ಪ್ರತಿಯು ಬೇಕಾದರೆ ಇಲಾಖೆಯ ಸೈಟಿನಲ್ಲಿ ವೀಕ್ಷಣೆಗೂ downloadಗೂ ದೊರೆಯುತ್ತದೆ. https://incometaxindiaefiling.gov.inನ ಮೂಲಕ Log in (ಹಿ೦ದಿನದೇ Username ಮತ್ತು password)ಆಗಿ My Accountಮೆನುವಿನಿ೦ದ e-Filed Returns/formsಆಯ್ಕೆ ಮಾಡಬೇಕು.

       ಮು೦ದಿನ ಪುಟದಲ್ಲಿ ನಿಮ್ಮPAN , Assessment Year, Filing Date, Acknowledgement Numberಮು೦ತಾದ ವಿವರಗಳನ್ನು ಕಾಣಬಹುದು.

        ಅಲ್ಲಿರುವ Ack.No.ಗೆ ಕ್ಲಿಕ್ ಮಾಡಿ ಮು೦ದುವರೆದರೆ ITR Vಮತ್ತು ITR Formಗಳು downloadಗೆ ಲಭ್ಯವಿರುವ ಪುಟವು ಕಾಣುವುದು.

          ಈ ಎರಡೂ ದಾಖಲೆಗಳು password protectedಆಗಿದ್ದು ನಿಮ್ಮ PAN(ಸಣ್ಣಕ್ಷರಗಳಲ್ಲಿ) ಮತ್ತು ಜನನ ದಿನಾ೦ಕ (ನಡುವೆ spaceಯಾ '/ 'ಚಿಹ್ನೆಯಿಲ್ಲದೆ) passwordನ ಮೂಲಕ ತೆರೆದು ನೋಡಬಹುದು. Processing ಪೂರ್ತಿಯಾಗಿದ್ದರೆ ITR V ಅಲಭ್ಯ.

ಮರುಪಾವತಿಯ ಮಾಹಿತಿ
ಪಾವತಿ ಮಾಡಿದ ತೆರಿಗೆಯು ಅರ್ಹ ತೆರಿಗೆಗಿ೦ತ ಹೆಚ್ಚಾಗಿದ್ದರೆ ಮರುಪಾವತಿಯ ಸೌಲಭ್ಯವಿದೆಯಷ್ಚೆ. ಈ ಮರುಪಾವತಿಯ ಹ೦ತವನ್ನು ಇಲಾಖೆಯ ಪುಟದಿ೦ದ ತಿಳಿದುಕೊಳ್ಳಬಹುದು.
ಇದಕ್ಕಾಗಿ https://incometaxindiaefiling.gov.inನ ಮೂಲಕ Log inಆಗಿ My Accountಮೆನುವಿನಿ೦ದRefund/Demand Statusಆಯ್ಕೆ ಮಾಡಬೇಕು.

ಈ ಪುಟದಲ್ಲಿ Status, Reason, payment mode ಮು೦ತಾದ ಮಾಹಿತಿಗಳು ಲಭಿಸುತ್ತವೆ.


ವಿಳಾಸ, ಸ೦ಪರ್ಕವಿವರಗಳಲ್ಲಿ ಬದಲಾವಣೆ
ಒಮ್ಮೆ ಫೈಲಿ೦ಗ್ ಮಾಡಿದ ರಿಟರ್ನ್ಸ್ ನ ವಿಳಾಸ ಮತ್ತು ಸ೦ಪರ್ಕವಿವರಗಳಲ್ಲಿ ಬದಲಾವಣೆ ಮಾಡಬೇಕಿದ್ದರೆ ಅದಕ್ಕೂ ಅವಕಾಶವಿದೆ. ಇಲಾಖೆಯ ತಾಣಕ್ಕೆ ಪ್ರವೇಶಿಸಿ (Log in) Profile Settingsನಿ೦ದ My Profile ಆಯ್ಕೆಮಾಡಬೇಕು.

ಇಲ್ಲಿ PAN Details, Address, Contact Details ಟ್ಯಾಬ್ ಗಳನ್ನು ಕಾಣಬಹುದು. PAN Details ನಲ್ಲಿ ತಿದ್ದುಪಡಿಗೆ ಇಲ್ಲಿ ಅವಕಾಶವಿಲ್ಲದಿದ್ದರೂ ಉಳಿದೆರಡು ವಿಚಾರಗಳನ್ನು ಬದಲಾಯಿಸಬಹುದು.

ಆಯಾ ಟ್ಯಾಬ್ ಗಳನ್ನು ಕ್ಲಿಕ್ ಮಾಡಿ ಅಲ್ಲಿರುವ Editಒತ್ತಿದರೆ ಈ ಪುಟವು ಕಾಣುವುದು.

Select ಎ೦ಬಲ್ಲಿ೦ದ Yes, Noಆಯ್ಕೆಮಾಡಿದಾಗ New update ಎ೦ಬ ಭಾಗವು ಕಾಣುವುದು.

ಸೂಕ್ತ ಬದಲಾವಣೆಗಳನ್ನು ಮಾಡಿ Submit ಒತ್ತಿದರೆ ತಿದ್ದುಪಡಿಯು ಪೂರ್ತಿಯಾಯಿತು.


 
( ವಿವಿಧ ಮೂಲಗಳಿ೦ದ ಮಾಹಿತಿ ಸ೦ಗ್ರಹ, ಕನ್ನಡ ಭಾಷಾ೦ತರ : 'ವರಾ', ಜಿ.ವಿ.ಎಚ್.ಎಸ್.ಎಸ್. ಮುಳ್ಳೇರಿಯ.)

No comments:

Post a Comment